Select Your Language

Notifications

webdunia
webdunia
webdunia
webdunia

ದಸರಾ ಬಲ ಭೀಮ ಆನೆ ಹುಡುಗಿಯರ ಮುಂದೆ ಭಾರೀ ನಾಟ್ಟಿ

ದಸರಾ ಬಲ ಭೀಮ ಆನೆ ಹುಡುಗಿಯರ ಮುಂದೆ ಭಾರೀ ನಾಟ್ಟಿ

Sampriya

ಮೈಸೂರು , ಮಂಗಳವಾರ, 15 ಅಕ್ಟೋಬರ್ 2024 (16:53 IST)
photo Courtesy Instagram
ಮೈಸೂರು ದಸರಾ ಡ್ಯೂಟಿಯನ್ನು ಯಶಸ್ವಿಯಾಗಿ ಮುಗಿಸಿ ಎಲ್ಲ ಆನೆಗಳು ನಾಡಿನಿಂದ ಕಾಡಿಗೆ ಪ್ರಯಾಣ ಬೆಳೆಸಿದೆ. ಕಳೆದ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ, ಜಂಬೂಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ.

ಇನ್ನೂ ಗಜಪಡೆಗಳು ಕೂಡಾ ಅಪಾರ ಅಭಿಮಾನಿಗಳನ್ನು ಹೊಂದಿರುತ್ತಾರೆ. ಈ ಹಿಂದೆ ಸಾವನ್ನಪ್ಪಿದ್ದ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಅ‍ಪಾರ ಜನರ ಪ್ರೀತಿಯನ್ನು ಗಳಿಸಿದ್ದ. ಇದೀಗ ಅಂಬಾರಿ ಹೊರುತ್ತಿರುವ ಅಭಿಮನ್ಯು ಕೂಡಾ ತನ್ನ ಶಿಸ್ತು ಹಾಗೂ ನಡವಳಿಕೆ ಮೂಲಕ ಎಲ್ಲರ ಮನಸ್ಸನ್ನು ಗೆದ್ದು, ಅಪಾರ ಅಭಿಮಾನಿಗಳನ್ನು ಗಳಿಸಿದ್ದಾನೆ. ಇನ್ನೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ  ಆನೆ ಭೀಮನ ತುಂಟಾಟದ ಬಗ್ಗೆ ಕ್ರೇಜ್ ಜೋರಾಗಿದೆ.

ಈಚೆಗೆ ಮೈಸೂರು ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಹಾಗೂ ಭೀಮ ಆನೆ ತನ್ನ ತುಂಟಾದ ಮೂಲಕ ಹೆಣ್ಮಕ್ಕಳ ನೆಚ್ಚಿನ ಆನೆಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಭೀಮನ ಮೇಲೆ ಕ್ರೇಜ್ ಜಾಸ್ತಿಯಾಗಿದೆ. ಹುಡುಗಿಯರು ಭೀಮನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಹುಡುಗಿಯರ ಮಾತಿಗೆ ರೆಸ್ಪಾಂಡ್  ಮಾಡುವ ಭೀಮನೇ ನಮ್ಮ ನೆಚ್ಚಿನ ಆನೆಯೆಂದು ಹೇಳುತ್ತಿದ್ದಾರೆ.

24 ವರ್ಷದ ಸ್ನೇಹಜೀವಿ ಭೀಮ ಆನೆ ಜಂಬೂಸವಾರಿ ವೇಳೆ ಜನಸಮೂಹದ ಕೂಗಿಗೆ ಸೊಂಡಿಲೆತ್ತಿ ನಮಸ್ಕಾರಿಸಿದ್ದಾನೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡು, ಬರೆದುಕೊಂಡಿದ್ದಾರೆ. 6 ತಿಂಗಳ ಮರಿ ಆಗಿದ್ದಾಗ ತಾಯಿ ಇಂದ ಬೇರ್ಪಟ್ಟು ನಾಗರಹೊಳೆ ಅಭಯಾರಣ್ಯದ ಭೀಮನಕಟ್ಟೆ ಎಂಬ ಜಾಗದಲ್ಲಿ ಸಿಕ್ಕಿದ, ಅದೇ ವರ್ಷದಲ್ಲಿ 6 ಮರಿಗಳು ಸಿಕ್ಕಿದ್ದು ಅದರಲ್ಲಿ ಬದುಕುಳಿದವ ತಿಂಡಿಪೋತ ಈ ಭೀಮ ಮಾತ್ರ ತುಂಟಾಟ, ತಿಂಡಿಪೋತ, ಸ್ನೇಹಜೀವಿ. ಮುಂದಿನ ಜಂಬೂಸವಾರಿ ರೂವಾರಿ ಆಗುವ ಎಲ್ಲಾ ಲಕ್ಷಣ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಕುಟುಂಬ ವಕ್ಫ್ ಆಸ್ತಿಯನ್ನೂ ನುಂಗಿದ್ರು: ಕಾಂಗ್ರೆಸ್ ನಾಯಕನ ಮೇಲೆ ಆರೋಪ