Select Your Language

Notifications

webdunia
webdunia
webdunia
webdunia

ಗೃಹಲಕ್ಷ್ಮೀ ಹಣದಿಂದ ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಿಸಿದ ವಿಜಯಪುರದ ಮಹಿಳೆ

Mysore Dasara 2024

Sampriya

ವಿಜಯಪುರ , ಶುಕ್ರವಾರ, 11 ಅಕ್ಟೋಬರ್ 2024 (19:52 IST)
Photo Courtesy X
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ನವರಾತ್ರಿ ಹಬ್ಬದ ವೇಳೆ ವಿಜಯಪುರದ ಮಹಿಳೆಯೊಬ್ಬರು ನಾಡದೇವಿಗೆ ಮಹಿಳೆಯೊಬ್ಬರು ಕಿರೀಟ ಮಾಡಿಸಿ, ಸುದ್ದಿಯಾಗಿದ್ದಾರೆ.

ಈಚೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಸೇವ್ ಮಾಡಿ ಮಗನಿಗೆ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅದಲ್ಲದೆ ಅತ್ತೆಯೊಬ್ಬರು ಈ ಹಣದಿಂದ ತನ್ನ ಸೊಸೆಯ ಜೀವನಕ್ಕಾಗಿ ಫ್ಯಾನ್ಸಿ ಅಂಗಡಿಯನ್ನು ಮಾಡಿಸಿಕೊಟ್ಟಿದ್ದರು.

 ವಿಜಯಪುರ ಜಿಲ್ಲೆಯ ಯಜಮಾನಿಯೊಬ್ಬರು ಕೂಡಿಟ್ಟಿದ್ದ ಇದೇ ಗೃಹಲಕ್ಷ್ಮಿ ಹಣದಿಂದಲೇ ನಾಡದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬಂದ ಭಾಗ್ಯಲಕ್ಷ್ಕೀ ಯೋಜನೆ ಹಣ ಕೂಡಿಟ್ಟಿದ್ದ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಹೂವಿನಹಳ್ಳಿಯ ಮಹಿಳೆ ಭಾಗಮ್ಮ, ದೇವಿಗೆ 250 ಗ್ರಾಂ ತೂಕದ ಬೆಳ್ಳಿ ಕಿರೀಟ ನೀಡಿದ್ದಾರೆ.


ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾಗಮ್ಮ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗಿದೆ.
ಇನ್ನು ಭಾಗಮ್ಮ ಬಿರಾದಾರ ಅವರು ಈ ಕಾರ್ಯಕ್ಕೆ ಸ್ಥಳೀಯ‌ ಮುಖಂಡರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೇ ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಭಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿ.ಸೋಮಣ್ಣ ಬೈಗುಳಕ್ಕೆ ಹೇರ್ ಸ್ಟೈಲ್ ಚೇಂಜ್ ಮಾಡಿದ ಪ್ರತಾಪ್ ಸಿಂಹ