Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಪಾಠ ..ಕಿರಿಕ್ ಟೀಚರ್

ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಪಾಠ ..ಕಿರಿಕ್ ಟೀಚರ್
ಬೆಂಗಳೂರು , ಗುರುವಾರ, 8 ಸೆಪ್ಟಂಬರ್ 2022 (15:41 IST)
ಶಿಕ್ಷಕಿಯಲ್ಲ, ಸದಾ ಎಣ್ಣೆ ಏಟಿನಲ್ಲೇ ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಟೀಚರಮ್ಮ. ಸಾಲದೆಂಬಂತೆ ಏರಿದ ಕಿಕ್ಕು ಇಳಿಯುತ್ತಿದ್ದಂತೆ ಮತ್ತೇರಿಸಲು ಡ್ರವರ್​ನಲ್ಲೂ ಮದ್ಯದ ಬಾಟಲ್​ಗಳನ್ನು ಇರಿಸಿಕೊಂಡಿದ್ದಳು.
ಆಕೆ ಅಂತಿಂತಹ ಶಿಕ್ಷಕಿಯಲ್ಲ, ಸದಾ ಎಣ್ಣೆ ಏಟಿನಲ್ಲೇ ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಟೀಚರಮ್ಮ.
ಸಾಲದೆಂಬಂತೆ ಏರಿದ ಕಿಕ್ಕು ಇಳಿಯುತ್ತಿದ್ದಂತೆ ಮತ್ತೇರಿಸಲು ಡ್ರವರ್​ನಲ್ಲೂ ಮದ್ಯದ ಬಾಟಲ್​ಗಳನ್ನು ಇರಿಸಿಕೊಳ್ಳುತ್ತಿದ್ದಳು ಕಣ್ರಪ್ಪೋ… ಸದಾ ಎಣ್ಣೆ ನಶೆಯಲ್ಲಿರುತ್ತಿರುವ ಈ ಟೀಚರಮ್ಮ ಗ್ರಾಮಸ್ಥರು ಹಾಗೂ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ ಆತ್ಮಹತ್ಯೆಯ ನಾಟಕ ಬೇರೆ ಮಾಡಿದ್ದಾಳೆ ಮಾರಾಯ್ರೆ. ಟೀಚರಮ್ಮನ ಎಣ್ಣೆ ನಶೆ ಬಗ್ಗೆ ತಿಳಿದ ಜನರು, ನಮ್ಮ ಮಕ್ಕಳಿಗೆ ಎಣ್ಣೆ ಶಿಕ್ಷಕಿ ಬೇಡವೇ ಬೇಡವೆಂದು ಪಟ್ಟುಹಿಡಿದು ನಿಂತ್ತಿದ್ದಾರೆ.
 
ತುಮಕೂರು ಜಿಲ್ಲೆಯ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿಗೆ ಕುಡಿತದ ಚಟ ಇದ್ದು, ನಿತ್ಯ ಮದ್ಯ ಸೇವನೆ ಮಾಡಿಯೇ ಶಾಲೆಗೆ ಬರುತ್ತಿದ್ದಳು. ಸಾಲದು ಎಂಬಂತೆ ಎಣ್ಣೆ ನಶೆ ಇಳಿದಾಗ ಮತ್ತೇರಿಲು ತನ್ನ ಡ್ರವರ್ ಒಳಗೂ ಮದ್ಯದ ಬಾಟಲ್​ಗಳನ್ನು ಇರಿಸಿಕೊಂಡಿದ್ದಾಳೆ. ಸದಾ ಎಣ್ಣೆ ಏಟಿನಲ್ಲೇ ಇರುತ್ತಿದ್ದ ಗಂಗಲಕ್ಷ್ಮಮ್ಮ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಳು.
20 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಲಕ್ಷ್ಮಮ್ಮನ ಪ್ರತಿನಿತ್ಯ ಜಗಳಕ್ಕೆ ಬೇಸತ್ತಿದ್ದಾರೆ. ಇಂದು ಸರಿಹೋಗಬಹುದು, ನಾಳೆ ಬುದ್ಧಿ ಬರಬಹುದು ಎಂದು ಯೋಚಿಸುತ್ತಿದ್ದ ಶಿಕ್ಷಕರೆಲ್ಲರೂ ಆಕೆಗೆ ಜನ್ಮದಲ್ಲಿ ಬುದ್ಧಿ ಬರಲ್ಲ ಎಂದು ಅರಿತು ಬೇರೆ ಕಡೆಗೆ ವರ್ಗಾವಣೆ ಪಡೆದು ಹೋಗುತ್ತಿದ್ದಾರೆ. ಪೊಲೀಸರು ಮತ್ತು ಗ್ರಾಮಸ್ಥರು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಲು ಮುಂದಾದಾಗ ಪೊಲೀಸರ ಕರ್ತವ್ಯಕ್ಕೂ ಆಕೆ ಅಡ್ಡಿಪಡಿಸಿದ್ದಾಳೆ. ಅನಿವಾರ್ಯವಾಗಿ ಗ್ರಾಮಸ್ಥರು ಟೇಬಲ್​ ಅನ್ನು ಹೊರತಂದು ಬೀಗ ಒಡೆದು ಡ್ರವರ್​ ತೆರೆದಿದ್ದಾರೆ. ಈ ವೇಳೆ ಮದ್ಯದ ಬಾಟಲ್​ಗಳು ಪತ್ತೆಯಾಗಿವೆ.
 
ಮದ್ಯದ ಬಾಟಲ್​ಗಳು ಪತ್ತೆಯಾಗುತ್ತಿದ್ದಂತೆ ಗಂಗಲಕ್ಷ್ಮಮ್ಮ ಆತ್ಮಹತ್ಯೆಯ ನಾಟಕವಾಡಿದ್ದಾಳೆ. ಶಾಲೆ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯನ್ನು ಬಿಇಓ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ಯಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ವ್ಯಕ್ತಿ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ ..