Select Your Language

Notifications

webdunia
webdunia
webdunia
webdunia

ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಬೆರಳು ಕಚ್ಚಿದ ಸೊಸೆ!

ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಬೆರಳು ಕಚ್ಚಿದ ಸೊಸೆ!
ಮುಂಬೈ , ಗುರುವಾರ, 8 ಸೆಪ್ಟಂಬರ್ 2022 (10:02 IST)
ಮುಂಬೈ: ಅತ್ತೆ-ಸೊಸೆ ನಡುವೆ ಮನೆಯಲ್ಲಿ ನಡೆಯುವ ಕಿರಿ ಕಿರಿಗಳು ಎಲ್ಲರ ಮನೆಯಲ್ಲೂ ಇರುವಂತದ್ದೇ. ಆದರೆ ಇಲ್ಲಿ  ಅತ್ತೆ-ಸೊಸೆ ನಡುವೆ ನಡೆದ ಜಗಳ ಅತಿರೇಕಕ್ಕೇರಿದೆ.

ತಾನು ಟಿವಿ ನೋಡುತ್ತಿದ್ದಾಗ ಟಿವಿ ಧ್ವನಿ ಕಡಿಮೆ ಮಾಡುವಂತೆ ಅತ್ತೆ ಆದೇಶಿಸಿದ್ದರು. ಆದರೆ ಸೊಸೆ ಕಿವಿಗೇ ಹಾಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಅತ್ತೆ ಟಿವಿ ಆಫ್ ಮಾಡಿದ್ದರು.

ಇದರಿಂದ ಆಕ್ರೋಶಗೊಂಡ ಸೊಸೆ ಅತ್ತೆಯ ಕೈ ಬೆರಳುಗಳನ್ನು ಕಚ್ಚಿದ್ದಾಳೆ. ಕಚ್ಚಿದ ತೀವ್ರತೆ ಎಷ್ಟಿತ್ತೆಂದರೆ ವೈದ್ಯರು ಬೆರಳುಗಳನ್ನು ಸರಿಪಡಿಸಲಾಗದೇ ಕತ್ತರಿಸಬೇಕಾಗಿ ಬಂದಿದೆ. ಇನ್ನು, ತಡೆಯಲು ಬಂದ ಗಂಡನ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾಳೆ. ಹೀಗಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಸ್ಪಂದನ ಹೆಸರಲ್ಲಿ ಸಮಾವೇಶ ನಡೆಸಲು ಮುಂದಾದ ಬಿಜೆಪಿ