Publish Date: Wed, 07 Sep 2022 (10:00 IST)
Updated Date: Wed, 07 Sep 2022 (10:10 IST)
ಮುಂಬೈ: ಊಟದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊಲೆವರೆಗೂ ಹೋದ ಘಟನೆಗಳನ್ನು ಕೇಳಿದ್ದೇವೆ. ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ.
ರಾತ್ರಿ ಊಟಕ್ಕೆ ಬಿರಿಯಾನಿ ಮಾಡಲಿಲ್ಲವೆಂದು ಪತ್ನಿಯ ಮೇಲೆ ಪಾನಮತ್ತನಾಗಿದ್ದ ಪತಿ ಚಾಕುವಿನಿಂದ ಇರಿದಿದ್ದಾನೆ. ಇತರ ಕುಟುಂಬ ಸದಸ್ಯರು ತಡೆಯಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.
ಇದೀಗ ಮಹಿಳೆ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.