Select Your Language

Notifications

webdunia
webdunia
webdunia
webdunia

ಧರ್ಮಸ್ಥಳಕ್ಕೂ ತಟ್ಟಿದೆ ಜಲಕ್ಷಾಮ; ಪ್ರಕಟಣೆಯೊಂದನ್ನು ಹೊರಡಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೂ ತಟ್ಟಿದೆ ಜಲಕ್ಷಾಮ; ಪ್ರಕಟಣೆಯೊಂದನ್ನು ಹೊರಡಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ
ಮಂಗಳೂರು , ಶನಿವಾರ, 18 ಮೇ 2019 (09:47 IST)
ಮಂಗಳೂರು : ರಾಜ್ಯದೆಲ್ಲಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದೀಗ ಕರ್ನಾಟಕದ ಪ್ರಸಿದ್ಧ ದೇವಾಲಯ ಧರ್ಮಸ್ಥಳದಲ್ಲೂ ಜಲಕ್ಷಾಮದ ಬಿಸಿ ತಟ್ಟಿದೆ.




ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಎಲ್ಲಾ ಕಡೆ ನೀರಿಗಾಗಿ ಪರದಾಟ ಶುರುವಾಗಿದೆ. ಈ ನಡುವೆ ಕರ್ನಾಟಕದ ಪ್ರಸಿದ್ಧ ದೇವಾಲಯ ಧರ್ಮಸ್ಥಳದಲ್ಲಿ ಎಲ್ಲಾ ಕಾಲದಲ್ಲೂ ತುಂಬಿತುಳುಕುತ್ತಿದ್ದ ನೇತ್ರಾವತಿ ನದಿ ಬತ್ತಿ ಹೋಗಿದೆ. ಇದರಿಂದ ದೇವರ ದರ್ಶನ ಬರುತ್ತಿದ್ದ ಭಕ್ತರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ  ಧರ್ಮಸ್ಥಳ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.


ಧರ್ಮಸ್ಥಕ್ಕೆ ಯಾತ್ರಾರ್ಥಿಗಳ ಉಪಯೋಗಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ನೇತ್ರಾವದಿ ನದಿಯಲ್ಲೂ ನೀರಿನ ಹರಿವು ತೀವ್ರ ತರದಲ್ಲಿ ಕಡಿಮೆಯಾಗಿದ್ದು, ಇದರಿಂದಾಗಿ ಧರ್ಮಸ್ಥಳದಲ್ಲಿ ದಿನದಿಂದ ದಿನಕ್ಕೆ ನೀರಿನ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡುವಂತೆ ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆ ಪ್ರವಾಸಕ್ಕೆಂದು ಬಂದ ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸರಿಂದ ಅತ್ಯಾಚಾರ