ಗೆಳೆಯನ ಜೊತೆ ಪ್ರವಾಸಕ್ಕೆಂದು ಬಂದ ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸರಿಂದ ಅತ್ಯಾಚಾರ

ಶನಿವಾರ, 18 ಮೇ 2019 (09:45 IST)
ಭುವನೇಶ್ವರ್ : ಗೆಳೆಯನ ಜೊತೆ ಪ್ರವಾಸಕ್ಕೆಂದು ಬಂದ ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಸಂತ್ರಸ್ತೆ ತನ್ನ ಗೆಳೆಯನ ಜೊತೆ ಪ್ರವಾಸಕ್ಕೆಂದು ಜಾರ್ಸಗುಡಾಕ್ಕೆ ಬಂದದ್ದು, ಇಬ್ಬರು  ಅಲ್ಲಿ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದರು. ಆದರೆ ಅಲ್ಲಿಗೆ ಬಂದ ಜಾರ್ಸಗುಡಾದ ಪೊಲೀಸರು ಅಪ್ರಾಪ್ತೆಯ ಮೇಲೆ ನಿರಂತರವಾಗಿ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ನಂತರ ಅಲ್ಲಿಂದ ಜಾರ್ಖಂಡಿನ ಜುಗ್ಸಾಲೈ ನಗರದ ಹೋಟೆಲ್‍ಗೆ ಬಂದಿದ್ದಾಗ ಗೆಳೆಯ ಆಕೆಯನ್ನ ಬಿಟ್ಟು ಪರಾರಿಯಾದ ಹಿನ್ನಲೆಯಲ್ಲಿ  ಹೋಟೆಲ್ ಮಾಲೀಕರ ಬಳಿ ಅಳಲು ತೋಡಿಕೊಂಡಿದ್ದಾಳೆ. ಈ ಬಗ್ಗೆ ಮಾಲೀಕ ಜುಗ್ಸಾಲೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸಂತ್ರಸ್ತೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಸಂತ್ರಸ್ತೆ ಜಾರ್ಸಗುಡಾದ ಪೊಲೀಸರ ವಿರುದ್ಧ ಜುಗ್ಸಾಲೈ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು  ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈವ್ ಸ್ಟ್ರೀಮಿಂಗ್ ಗೆ ಹೊಸ ನಿಯಮ ಜಾರಿಗೆ ತಂದ ಫೇಸ್ ​ಬುಕ್​. ನಿಯಮ ಮೀರಿದರೆ ಏನಾಗುತ್ತದೆ ಗೊತ್ತಾ?