ರಾಡ್​​ನಿಂದ ಹೊಡೆದು ಪೊಲೀಸ್​​ ಪೇದೆ ಕೊಲೆ?

Webdunia
ಶುಕ್ರವಾರ, 24 ಮಾರ್ಚ್ 2023 (17:10 IST)
ಬಳ್ಳಾರಿಯಲ್ಲಿ DAR ಪೊಲೀಸ್ ಪೇದೆ ಜಾಫರ್ ಎಂಬುವವರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಪೊಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಸಾವನಪ್ಪಿದ್ದು, ಇದು ಸಹಜ ಸಾವಲ್ಲ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಪ್ರಜ್ಞೆ ತಪ್ಪಿಸಿ, ರಾಡಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.. ಕಿವಿಯಲ್ಲಿ ಅಧಿಕ ರಕ್ತಸ್ರಾವದಿಮದ ಗಾಯಗೊಂಡಿದ್ದ ಜಾಫರ್​ನನ್ನು ಬಳ್ಳಾರಿಯ ವಿಮ್ಸ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾಫರ್​​ ಮೃತ ಪಟ್ಟಿದ್ದಾರೆ. 2009ರಲ್ಲಿ DAR ಪೊಲೀಸ್ ಪೇದೆಯಾಗಿ ಜಾಫರ್​ ನೇಮಕವಾಗಿದ್ರು. ಜಾಫರ್​​​ ಎರಡು ಮದುವೆಯಾಗಿದ್ದು, ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಈಕೆ ತವರು ಮನೆಯಲ್ಲೇ ಇದ್ರು. ಎರಡನೇ ಹೆಂಡತಿ ಹಿಂದೂ ಧರ್ಮಕ್ಕೆ ಸೇರಿದ್ದು, ಈಕೆ ಆಸ್ಪತ್ರೆವೊಂದರಲ್ಲಿ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿದ್ರು. ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಮತ್ತು ಜಾಫರ್​​​ ನಡುವೆ ಜಗಳ ನಡೆದಿತ್ತಂತೆ. ಜಾಫರ್ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ
Show comments