Select Your Language

Notifications

webdunia
webdunia
webdunia
webdunia

ರಾಮಮಂದಿರ ನೋಡಿ ಮತ ಹಾಕಬೇಡಿ

Ram Mandir

geetha

ನವದೆಹಲಿ , ಸೋಮವಾರ, 5 ಫೆಬ್ರವರಿ 2024 (16:00 IST)
ನವದೆಹಲಿ : ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೋಮವಾರ ಮಾಧ್ಯಮಗಳೊಂದಿಗೆ  ಪ್ರತಿಕ್ರಿಯೆ ನೀಡಿದ ಅವರು,
Photo Courtesy: Twitter
ರಾಮಮಂದಿರ ನಿರ್ಮಾಣ ಆಗಿದೆ. ರಾಮಮಂದಿರ ನಿರ್ಮಾಣದ ವಿಷಯವನ್ನು ಮನಸಿನಲ್ಲಿ ಇಟ್ಟುಕೊಂಡು ಯಾರೂ ಮತ ಚಲಾಯಿಸಬಾರದು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿಕೆ ನೀಡಿದ್ದಾರೆ.ಜೊತೆಗೆ, ಬಾಲ್ಯದಿಂದಲೂ ರಾಮನ ಬಗ್ಗೆ ನಾನು ಒಲವು ಹೊಂದಿದ್ದೇನೆ. ಬಿಜೆಪಿಗೆ ರಾಮನ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ನುಡಿದ ತರೂರ್‌, ನನ್ನ ರಾಮನನ್ನು ಬಿಜೆಪಿಯವರಿಗೆ ಒಪ್ಪಿಸುವುದಿಲ್ಲ ಎಂದು ಹೇಳಿದ್ದಾರೆ. 

ಇನ್ನೂ ಎಷ್ಟು ದಿನಗಳ ಕಾಲ ನೀವು ಅದರ ಬಗ್ಗೆಯೇ ಮಾತನಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. 
ಜನರನ್ನು ತಮ್ಮ ಬಗ್ಗೆ ಯೋಚಿಸುವಂತೆ ಮಾಡಬೇಕಿದೆ ಎಂದು ನುಡಿದ ಶಶಿ ತರೂರ್‌,   ನಮ್ಮ ಜನಜೀವನ ಈ ಸರ್ಕಾರದಿಂದ ಎಷ್ಟು ಸುಧಾರಿಸಿದೆ ಎಂದು ಮತದಾರರು ಯೋಚಿಸಬೇಕು. ಅವರಿಗೆ ಉದ್ಯೋಗ ದೊರೆಕಿದೆಯೇ? ಈ ಸರ್ಕಾರದಿಂದ ಯಾವುದಾದರೂ ಪ್ರಯೋಜನವಾಗಿದೆಯೇ ಎಂದು ತರೂರ್‌ ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಮರಿಯನ್ನು ಮಹಡಿಯಿಂದ ಎಸೆದ ಬಾಲಕ