Select Your Language

Notifications

webdunia
webdunia
webdunia
webdunia

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

ಸಿ.ಟಿ.ರವಿ

Sampriya

ಬೆಂಗಳೂರು , ಮಂಗಳವಾರ, 27 ಮೇ 2025 (18:21 IST)
ಬೆಂಗಳೂರು: ಕರ್ನಾಟಕದಲ್ಲಿ ಯಾವ ಸರಕಾರ ಇದೆ? ಸಿದ್ದರಾಮಯ್ಯರ ಸರಕಾರವೇ? ಟಿಪ್ಪು ಸುಲ್ತಾನ್ ಸರಕಾರವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್, ಮೈಸೂರು ಸಂಸ್ಥಾನವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದಾಗ ಕನ್ನಡ ಆಡಳಿತ ಭಾಷೆಯ ಬದಲಾಗಿ ಪಾರ್ಸಿ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ್ದ ಎಂದು ಗಮನ ಸೆಳೆದರು.

ಇವರ ಮೇಲೆ ಏನಾದರೂ ಟಿಪ್ಪುವಿನ ಭೂತದ ಪರಕಾಯ ಪ್ರವೇಶ ಆಗಿದೆಯೇ ಎಂದು ಕೇಳಿದರು. ಇವರ ಮೂಲಕ ಕನ್ನಡವನ್ನು ಎರಡನೇ ದರ್ಜೆಗೆ, ಮೂರನೇ ದರ್ಜೆಗೆ ಇಳಿಸುವ ಮತ್ತು ಕನ್ನಡದ ಸಹೋದರ ಭಾಷೆಗಳನ್ನು ಮುಗಿಸುವಂಥ ಯೋಜನೆ ಹಾಕಿಕೊಂಡಿದ್ದಾರಾ ಎಂಬ ಅನುಮಾನ ಬಂತು. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಮುಖ್ಯಮಂತ್ರಿಗಳ ರಾಜಕಾರಣವು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ರಾಜ್ಯ ಮಟ್ಟದಲ್ಲಿ ಸುದ್ದಿ ಆಗಿತ್ತು ಎಂದು ವಿವರಿಸಿದರು. ನನಗೆ ಆಶ್ಚರ್ಯ ಮತ್ತು ಆಘಾತ ಆಗಿದೆ. ಕರ್ನಾಟಕದಲ್ಲಿ ಉರ್ದು ಭಾಷೆಯನ್ನು ಪ್ರಮೋಟ್ ಮಾಡಲು 100 ಕೋಟಿ, ಕನ್ನಡಕ್ಕೆ 32 ಕೋಟಿ, ಕೊಡವ, ಕೊಂಕಣಿ, ತುಳು ಭಾಷೆಗಳಿಗೆ 45 ಲಕ್ಷ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಾವ ಸರಕಾರ ಇದೆ? ಎಂದು ಪ್ರಶ್ನಿಸಿದರು.

ಒಂದು ಕಡೆ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಬದಲಿಗೆ ನಾವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದೇವೆ. ಇನ್ನೊಂದು ಕಡೆ ಕನ್ನಡ ಭಾಷಾ ಬೆಳವಣಿಗೆಗೆ 32 ಕೋಟಿ ಕೊಟ್ಟು, ಉರ್ದುವಿಗೆ 100 ಕೋಟಿ ಕೊಡುವುದಾದರೆ, ಇದು ಕ್ಷಮಿಸಲಾಗದ ಅಪರಾಧ; ನಾಚಿಕೆಗೇಡಿನ ಸಂಗತಿ. ತಕ್ಷಣ ಈ ನಿರ್ಧಾರವನ್ನು ವಾಪಸ್ ಪಡೆಯಲು ಆಗ್ರಹಿಸಿದರು.
ಕನ್ನಡ ಭಾಷೆಗೆ ಅಪಮಾನ ಮಾಡದಿರಿ. ಇದನ್ನು ಸಹಿಸಲು ಅಸಾಧ್ಯ ಎಂದು ಎಚ್ಚರಿಸಿದರು. ಇದು ಚರಿತ್ರೆಯಲ್ಲಿ ಮುಖ್ಯಮಂತ್ರಿಗಳು, ಸರಕಾರಕ್ಕೆ ಕಳಂಕ ತರಲಿದೆ ಎಂದು ಎಚ್ಚರಿಸಿದರು.

ಪಕ್ಷದ್ರೋಹ ಸಹಿಸಲಾಗದು:
ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾರು ಪಕ್ಷ ದ್ರೋಹ ಮಾಡಿದರೂ ತಪ್ಪೇ ಎಂದು ಉತ್ತರ ಕೊಟ್ಟರು. ಕೆಲವೊಂದು ಸಂಗತಿಗಳಲ್ಲಿ ಶೂನ್ಯ ಸಹಿಷ್ಣುತೆ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಮತ್ತೇ ಝಳಪಿಸಿದ ತಲವಾರು, ಮುಸ್ಲಿಂ ಯುವಕನ ಬರ್ಬರ ಹತ್ಯೆ