ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Sampriya
ಗುರುವಾರ, 17 ಏಪ್ರಿಲ್ 2025 (14:37 IST)
Photo Credit X
ಬೆಂಗಳೂರು: ವಿಶ್ವದಲ್ಲೇ ಅತೀ ದುಬಾರಿಯಾಗಿರುವ ನಾಯಿಯೊಂದನ್ನು ಖರೀದಿ ಮಾಡಿದ್ದೇನೆಂದು ಹೇಳಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್‌ಗೆ ಇದೀಗ ಇಡಿ ಶಾಕ್‌ ನೀಡಿದೆ.  

₹50 ಕೋಟಿ ರೂಪಾಯಿಯ ಶ್ವಾನವೊಂದನ್ನು ಖರೀದಿ ಮಾಡಿರುವುದಾಗಿ ಹೇಳಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಖರೀದಿ ಮಾಡಿದ ನಾಯಿಯ ಬೆಲೆ ₹50 ಕೋಟಿ ಅಲ್ಲ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳಿ ಪರಿಶೀಲನೆ ಮುಂದುವರಿಸಿದ್ದಾರೆ.

ಸತೀಶ್‌ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಕೇಶಿಯನ್‌ ಶೆಫರ್ಡ್‌ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಎಂದೂ ಕರೆಯುತ್ತಾರೆ. ಸತೀಶ್ ಅವರು ವಿವಿಧ ತಳಿಯ ನಾಯಿಗಳನ್ನು ವಿದೇಶಗಳಿಂದ ಸಂಗ್ರಹಿಸುವ ಮೂಲಕ ಭಾರೀ ಖ್ಯಾತಿಯನ್ನು ಗಳಿಸಿದ್ದಾರೆ. ದುಬಾರಿ ಬೆಲೆಯ ನಾಯಿಗಳನ್ನು ಸಾಕಿ, ಈ ಮೂಲಕನೇ ಸುದ್ದಿಯಲ್ಲಿರುವ ಸತೀಶ್ ಅವರು ಬೆಂಗಳೂರಿನವರು.

ಇನ್ನೂ ಹಲವು ಕಾರ್ಯಕ್ರಮಗಳಲ್ಲೂ ತಮ್ಮ ನಾಯಿಗಳನ್ನು ಕರೆತರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments