Publish Date: Mon, 05 Sep 2022 (15:46 IST)
Updated Date: Mon, 05 Sep 2022 (14:49 IST)
ಬಾಲಕಿಯ ಮೇಲೆ ನಾಯಿಯೊಂದು ಗಂಭೀರ ಗಾಯಗೊಳಿಸಿರುವ ಘಟನೆ ಬಿಳಿಕೆರೆ ಹೋಬಳಿಯ ಕುಪ್ಪೆದಲ್ಲಿ ನಡೆದಿದೆ.
ಕುಪ್ಪೆ ಗ್ರಾಮದ ಕೃಷ್ಣಣ್ಣ ಎಂಬುವವರ ಮಗಳಾದ ತನುಜ ಎಂಬ 11 ವರ್ಷದ ಬಾಲಕಿಯೇ ಗಂಭೀರವಾಗಿ ಗಾಯಗೊಂಡ ಬಾಲಕಿ, ಈಕೆ ರಸ್ತೆ ಬದಿ ನಿಂತಿರುವ ಸಂದರ್ಭದಲ್ಲಿ ಏಕಾಏಕಿ ಎರಗಿದ ಯಮ ರಾಕ್ಷಸ ನಾಯಿ ಗಂಭೀರವಾಗಿ ಗಾಯಗೊಳಿಸಿದೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿಯನು ಕೊಂದು, ನಾಯಿ ಮಾಲೀಕನಿಗಾಗಿ ಗ್ರಾಮಸ್ಥರ ಹುಡುಕಾಟ
ಬಾಲಕಿಯನ್ನು ಗಂಭೀರವಾಗಿ ಗಾಯಗೊಳಿಸಿರುವುದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ನಾಯಿಯನು ಹುಡುಕಿ ಕೊಂದಿದ್ದಾರೆ. ಮುಂದುವರಿದು ನಾಯಿಯ ಮಾಲೀಕನಿಗಾಗಿ ಹುಡುಕಾಟ ನಡೆಸಿದ್ದಾರೆ.