Select Your Language

Notifications

webdunia
webdunia
webdunia
webdunia

ಲೈಂಗಿಕ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ಮನಸ್ಸು ಬೇರೆ ಬೇರೆಯಾಗಿರುತ್ತದೆಯೇ?

ಲೈಂಗಿಕ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ಮನಸ್ಸು ಬೇರೆ ಬೇರೆಯಾಗಿರುತ್ತದೆಯೇ?
ಬೆಂಗಳೂರು , ಸೋಮವಾರ, 1 ಏಪ್ರಿಲ್ 2019 (06:09 IST)
ಬೆಂಗಳೂರು : ಪ್ರಶ್ನೆ : ಲೈಂಗಿಕ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ಮನಸ್ಸು ಯೋಚಿಸುವ ರೀತಿ ಒಂದೆಯಾಗಿರುತ್ತವೆಯೇ? ಇಲ್ಲವೇ ಬೇರೆ ಬೇರೆಯಾಗಿತ್ತವೆಯೇ?


ಉತ್ತರ : ಲೈಂಗಿಕತೆಯ ವಿಷಯದಲ್ಲಿ ಪುರುಷ ಮತ್ತು ಮಹಿಳೆಯ ಮನಗಳು ಬೇರೆ ಬೇರೆಯಾಗಿವೆ. ಯಾಕೆಂದರೆ ಲೈಂಗಿಕವಾಗಿ ಪ್ರಚೋದನೆ ನೀಡುವ ಚಿತ್ರವೊಂದನ್ನು ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷನಿಗೆ ತೋರಿಸಿದರೆ ಇಬ್ಬರ ಪ್ರತಿಕ್ರಿಯೆಯೂ ಬೇರೆ ಬೇರೆಯಾಗಿರುತ್ತದೆ. ಚುಂಬನ ಅಪ್ಪುಗೆಯ ವಿವರಗಳನ್ನು ಮಹಿಳೆ ಗಮನಿಸಿದರೆ ಪುರುಷರು ಕೇಂದ್ರಭಾಗವನ್ನು ಮಾತ್ರವೇ ಗಮನಿಸುತ್ತಾರೆ.


ಅಲ್ಲದೇ ಸರಸದಲ್ಲಿದ್ದಾಗಲೂ ಅವರ ಮನಗಳು ಸ್ಪಂದಿಸುವ ರೀತಿಯೂ ಭಿನ್ನವಾಗಿರುತ್ತವೆ. ಸಂಶೋಧನೆಯೊಂದರ ಪ್ರಕಾರ ಪುರುಷರಿಗೆ ಕೇವಲ ಮಹಿಳೆಯರ ದೇಹದ ಕೆಲವು ಅಂಗಗಳ ಚಿತ್ರವನ್ನು ತೋರಿಸಿದರೂ ಸಾಕು, ಉದ್ರೇಕ ಪಡೆಯುತ್ತಾರೆ ಹಾಗೂ ಮಿಲನದ ಸಮಯ ದಲ್ಲಿಯೂ ಇವರು ಕೇವಲ ಒಂದು ಅಂಗದ ಮೇಲೆ ಅದರಲ್ಲೂ ವಿಶೇಷವಾಗಿ ಸ್ತನಗಳತ್ತ ಪುರುಷರು ಅತಿ ಹೆಚ್ಚು ಉತ್ಸುಕರಾಗಿದ್ದು ತಮ್ಮ ಗಮನವನ್ನು ಕೇಂದ್ರೀಕರಿಸಿರುತ್ತಾರೆ.


ಆದರೆ ಮಹಿಳೆಯರಿಗೆ ಪರಿಪೂರ್ಣವಾದ ಅನುಭವ ಬೇಕಾಗಿರುತ್ತದೆ. ಇದರಲ್ಲಿ ಆತ್ಮೀಯ ಅಪ್ಪುಗೆ, ಚುಂಬನ, ತೃಪ್ತಿತರುವ ದೈಹಿಕ ಸಂಬಂಧ ಮೊದಲಾದವು, ಒಟ್ಟಾರೆ ತಮ್ಮ ಪುರುಷ ಎಲ್ಲಾ ವಿಭಾಗಗಳಿಂದಲೂ ತಮ್ಮನ್ನು ಆವರಿಸಿಕೊಳ್ಳಬೇಕು ಎಂದು ಬಯಸುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಬ್ಯಾಂಕ್ ಆಫ್‍ ಬರೋಡಾದೊಂದಿಗೆ ವಿಲೀನಗೊಳ್ಳಲಿದೆ ವಿಜಯ ಬ್ಯಾಂಕ್‍