Select Your Language

Notifications

webdunia
webdunia
webdunia
webdunia

ಅನಾಥ ಹೆಣದಲ್ಲೂ ಹಣ ಮಾಡ್ತಿದೆಯಾ ಸರ್ಕಾರ?

ಅನಾಥ ಹೆಣದಲ್ಲೂ ಹಣ ಮಾಡ್ತಿದೆಯಾ ಸರ್ಕಾರ?
bangalore , ಸೋಮವಾರ, 31 ಜುಲೈ 2023 (19:00 IST)
ಅನಾಥ ಶವಗಳನ್ನ ಮಾರಾಟ ಮಾಡ್ತಿರೋ ಆರೋಪ ಸರ್ಕಾರದ ಮೇಲೆ ಕೇಳಿಬಂದಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವ ಮಾರಾಟ ಮಾಡಲಾಗ್ತಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ ಮಾಡಿದ್ದಾರೆ.
 
ವಿಕ್ಟೋರಿಯ, ಬೌರಿಂಗ್,ಕೆಸಿ.ಜನರಲ್ ಆಸ್ಪತ್ರೆಗಳಲ್ಲಿ ಶವ ಮಾರಾಟವಾಗ್ತಿದೆ .ಅಂಗಾಂಗಗಳನ್ನ ಖಾಸಗಿ ಆಸ್ಪತ್ರೆ,ಲ್ಯಾಬ್ ಗಳಿಗೆ ಮಾರಾಟ ಮಾಡಲಾಗ್ತಿದೆ.ಆಸ್ಪತ್ರೆಯ ವೈದ್ಯರು,ಸಿಬ್ಬಂದಿ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ  ಆರೋಪ ಕೇಳಿಬಂದಿದೆ.ಎನ್ ಜಿ ಒ ಹೆಸರಲ್ಲಿ ಬರುವವರಿಗೆ ಶವ ನೀಡ್ತಿದ್ದಾರೆ.ಅವರು ಲ್ಯಾಬ್ ಗಳಿಗೆ ಶವ ಮಾರುತ್ತಿದ್ದಾರೆ.ಈ ಬಗ್ಗೆ ಗೃಹಸಚಿವರು, ಆರೋಗ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ ಹೆಚ್ಚಿನ ತನಿಖೆ ನಡೆಸಿ ಅಂತಾ  ಸರ್ಕಾರಕ್ಕೆ ಎನ್.ಆರ್.ರಮೇಶ್ ಒತ್ತಾಯ ಮಾಡಿದ್ದಾರೆ.
 
ಎನ್.ಆರ್.ರಮೇಶ್ ಆರೋಪಕ್ಕೆ ದಿನೇಶ್ ಗುಂಡೂರಾವ್ ಅಸಡ್ಡೆ ತೋರಿದ್ದು,ಬಿಜೆಪಿಯವರದ್ದು ಇದೆಲ್ಲ ಇದ್ದಿದ್ದೆ ಬಿಡಿ ಅಂತಾ ತಾತ್ಸಾರ ತೋರಿದ್ದಾರೆ. ಹಾಗಿದ್ರೆ ಸರ್ಕಾರ ಏನೇ ಮಾಡಿದ್ರೂ ಪ್ರಶ್ನಿಸಬಾರದಾ?ಸರ್ಕಾರ ಮಾಡೋ ಕೆಲಸ ಎಲ್ಲಾ ಸರಿನಾ? ಅಂತಾ ಎನ್ ಆರ್ ರಮೇಶ್ ಪ್ರಶ್ನೆ ಮಾಡ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸೈಟ್ ವಿಚಾರಕ್ಕೆ ನಿವೃತ್ತ ಏರ್ಪೋರ್ಸ್ ಅಧಿಕಾರಿ ಮನೆಗೆ ನುಗ್ಗಿ ಗಲಾಟೆ ಆರೋಪ