Select Your Language

Notifications

webdunia
webdunia
webdunia
webdunia

ಸ್ಪೀಕರ್ ಬುಕ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ!

ಸ್ಪೀಕರ್ ಬುಕ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ!
ಬೆಂಗಳೂರು , ಶನಿವಾರ, 29 ಜುಲೈ 2023 (10:40 IST)
ಬೆಂಗಳೂರು : ನಿವೃತ್ತ ಯೋಧರೊಬ್ಬರಿಂದ ಹಂತ ಹಂತವಾಗಿ 1 ಲಕ್ಷ ರೂ. ಹಣ ಹಾಕಿಸಿಕೊಂಡು ಯಾಮಾರಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಮಹೇಶ್ ವಂಚನೆಗೊಳಗಾದ ನಿವೃತ್ತ ಯೋಧ. ಮೋಸ ಮಾಡಲೆಂದೇ ವಂಚಕ MOSA1122@SBI ಯುಪಿಐ ಐಡಿ ಮಾಡಿದ್ದ. ಫೋನ್ ಮಾಡಿ ಅಕೌಂಟ್ ಚೆಕ್ ಮಾಡು ಅಂತ ಹೇಳಿದ್ದ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯವಾಗಿದೆ. 

ನಿವೃತ್ತ ಯೋಧ 5,499 ರೂ. ಮೌಲ್ಯದ ಸ್ಪೀಕರ್ ಬುಕ್ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಮೂರು ದಿನದಲ್ಲಿ ನಿಮ್ಮ ಖಾತೆಗೆ ಹಣೆ ಜಮೆ ಆಗುತ್ತೆ ಅನ್ನೋ ಸಂದೇಶ ಕೂಡ ಬಂದಿತ್ತು. ಹಣ ಜಮೆ ಆಗದಿದ್ದಾಗ ಮಹೇಶ್ ಗೂಗಲ್ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಿದ್ದರು.

ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೆ ಅಕೌಂಟ್ ಪರೀಕ್ಷಿಸಲು ಹೇಳುತ್ತಿದ್ದ. ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್ನಿಂದ ಮಾಯವಾಗಿದೆ. ನಿವೃತ್ತ ಯೋಧ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮರನಾಥ ಯಾತ್ರೆ ಮುಗಿಸಿ ವಾಪಸ್ ಆಗ್ತಿದ್ದವರು ಯಮಲೋಕಕ್ಕೆ !