Webdunia - Bharat's app for daily news and videos

Install App

ರಾಹುಲ್ ಗಾಂಧಿ ಪ್ರಧಾನಿಯಾಗಲೇ ಬೇಕು ಎಂದವರಾರು?

Webdunia
ಬುಧವಾರ, 27 ಫೆಬ್ರವರಿ 2019 (18:30 IST)
ನರೇಂದ್ರ ಮೋದಿ‌ ಹೋಗಲೇ ಬೇಕು, ಬಿಜೆಪಿ ತೊಲಗಲೇ ಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಹೇಳಿಕೆ ನೀಡಿದ್ದು, ಮೋದಿ ಅವರು ಕಪ್ಪು ಹಣ ತರುತ್ತೇವೆ, ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು ಎಲ್ಲಿ ‌ಬಂದಿದೆ? ಪ್ರತಿ‌ವರ್ಷ 2 ಕೋಟಿ‌ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಬರೀ 27 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ. ಮೋದಿಯವರೇ ಎಲ್ಲಿ‌ ಭ್ರಷ್ಟಾಚಾರ ನಿಂತಿದೆ? ಯಾರ ಬಳಿ ಕಪ್ಪು ಹಣ ಇತ್ತೋ ಅವರು ವೈಟ್ ಮನಿ ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಿದರು.

ಮೋದಿ‌ ಹೇಳಿದ್ದ ಒಂದೇ ಒಂದು‌ ಕೆಲಸ ಮಾಡಿಲ್ಲ. ಇವತ್ತು ರೈತರ ಸಾಲ ಮನ್ನಾ ಮಾಡಿದ್ದರೆ, ಅದು ನಮ್ಮ‌ ಸರ್ಕಾರ ಎಂದರು.
ನೀರವ ಮೋದಿ, ಲಲಿತ ಮೋದಿ, ಮಲ್ಯಾ ಅಂತಹವರ ಸಾಲ ಮನ್ನಾ ಮಾಡುತ್ತಾರೆ. ಮಾತೆತ್ತಿದರೆ ನಾನು ಚೌಕಿದಾರ್, ನಾನು ಚೌಕಿದಾರ್ ಎನ್ನುತ್ತೀರಾ. ನೀವು ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ್ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ರಫೆಲ್‌ನಲ್ಲಿ 39 ಸಾವಿರ ಕೋಟಿ‌ ಹಗರಣ ನಡೆದಿದೆ. ನರೇಂದ್ರ ಮೋದಿ‌ ಐದು‌ ವರ್ಷದ ಸಾಧನೆಗಳ ಕುರಿತು ಎಲ್ಲಿಯೂ ಮಾತಾನಾಡಲ್ಲ. ಯಾಕೆಂದರೆ ಅವರಿಗೆ ಮಾತನಾಡಲು ಏನು‌ ಇಲ್ಲ. ಇಂದು ಯಡಿಯೂರಪ್ಪ ‌ವಿರೋಧ‌ ಪಕ್ಷದ ನಾಯಕನಾಗಿ ಅವರ ಕೆಲಸ ಮಾಡಿಲ್ಲ. ಮಿಸ್ಟರ್ ಯಡಿಯೂರಪ್ಪ ಕೋಟ್ಯಾಂತರ ಹಣ ಕೊಟ್ಟು ನಮ್ಮ ಶಾಸಕರನ್ನು ಕೊಂಡು ಕೊಳ್ಳಲು ನೋಡಿದ್ದರು. ಯಡಿಯೂರಪ್ಪ ನವರಿಗೆ ಹಣ ಸರಬರಾಜು ಮಾಡಿದ್ದು ಮಿಸ್ಟರ್ ಚೌಕಿದಾರ್, ಹಾಗೂ ಶಾ ಎಂದು ಟೀಕಿಸಿದರು.

ಈ ಅಮಿತಾ ಶಾ ಸೇರಿದಂತೆ ಹಲವು ಬಿಜೆಪಿಗರು ಜೈಲಿಗೆ ಹೋಗಿ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಬದಲಾವಣೆ ಆಗಲೇಬೇಕು. ನರೇಂದ್ರ ಮೋದಿ‌ ಹೋಗಲೇ ಬೇಕು, ಬಿಜೆಪಿ ತೊಲಗಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments