Publish Date: Wed, 27 Feb 2019 (18:03 IST)
Updated Date: Wed, 27 Feb 2019 (18:05 IST)
ಪಾಕಿಸ್ತಾನದ ಉಗ್ರರು ನಮ್ಮ ದೇಶದ 44 ಯೋಧರನ್ನು ಬಲಿಪಡೆದುಕೊಂಡಿದ್ದರು. ಪಾಕ್ ಯುದ್ಧ ಸಾರಲು ಮುಂದಾದ್ರೆ ಅದಕ್ಕೆ ಉತ್ತರ ಕೂಡಾ ಹಾಗೇ ಇರುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರ ನಗರದ ಸೈನಿಕ ಶಾಲೆಯ ಹೆಲಿಪ್ಯಾಡನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ನಮ್ಮ 44 ಯೋಧರನ್ನು ಅವರು ಕೊಂದು ಹಾಕಿದ್ದರು. ಈ ಹಿಂದೆ ಕೂಡಾ ಪಾಕಿಸ್ತಾನದೊಂದಿಗೆ ಯುದ್ಧಗಳಾಗಿವೆ. ಅವತ್ತು ಅವರ ಪರಿಸ್ಥಿತಿ ಏನಾಗಿದೆ ಎಂದು ಅವರು ತಿಳಿದುಕೊಳ್ಳಬೇಕು ಎಂದರು.
ಅವರು ಯುದ್ಧ ಸಾರಲು ಸಿದ್ಧವಾದರೆ ಅದಕ್ಕೆ ಪ್ರತ್ಯುತ್ತರ ಕೂಡಾ ಹಾಗೇ ಇರತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.