Select Your Language

Notifications

webdunia
webdunia
webdunia
webdunia

ಪ್ರಾದೇಶಿಕ ಪಕ್ಷ ಉಳಿಸಬೇಕು ಕಾರ್ಯಕರ್ತರಿಗೆ ಕರೆ ನೀಡಿದ ದೊಡ್ಡಗೌಡ್ರು..!

ಪ್ರಾದೇಶಿಕ ಪಕ್ಷ ಉಳಿಸಬೇಕು ಕಾರ್ಯಕರ್ತರಿಗೆ ಕರೆ ನೀಡಿದ ದೊಡ್ಡಗೌಡ್ರು..!
bangalore , ಸೋಮವಾರ, 28 ಆಗಸ್ಟ್ 2023 (21:00 IST)
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಸಂಘಟನೆ ಮಾಡಬೇಕೇಂಬ ನಿರ್ದಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಮತ್ತೆ ಅಖಾಡಕ್ಕಿಳಿದಿದ್ದಾರೆ.. ಪಕ್ಷ ಸಂಘಟನೆ ಸೇರಿದಂತೆ , ಅಪರೇಷನ್ ಹಸ್ತ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೊಡ್ಡಗೌಡ್ರು ಸುದ್ದಿಗೋಷ್ಟಿ ನಡೆಸಿದ್ರು,ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಜೆಡಿಎಸ್ ವಲಯದಲ್ಲಿ ಅಸಮಧಾನ ಹೆಚ್ಚಾಗಿದೆ ಅನ್ನೋದು ಪಕ್ಷದ ವಲಯದಲ್ಲೇ ಕೇಳಿ ಬರ್ತಿದೆ.. ಸಮಸ್ಯೆಗಳ ಚಕ್ರವ್ಯೂಹದಿಂದ ಹೊರಬರೋದಕ್ಕೆ ಹಾಗೂ ಮತ್ತೆ ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಪಕ್ಷ ಉಳಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ದಳಪತಿಗಳು.. ಮುಂಬರುವ ಲೋಕಸಭಾ ಚುನಾವಣೆ, ‌ಜಿಲ್ಲಾ ತಾಲ್ಲೂಕು ಪಂಚಾಯತ್ ಚುನಾವಣೆಗೆ ತಯಾರಿ ಸೇರಿದಂತೆ ಪಕ್ಷ ಸಂಘಟನೆ ವಿಚಾರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ್ರು ಇಂದು ಸುದ್ದಿಗೋಷ್ಟಿ ನಡೆಸಿ ಪಕ್ಷ ಸಂಘಟನೆಗೆ ನಾಯಕರ ರಾಜ್ಯ ಪ್ರವಾಸ ಸೇರಿದಂತೆ ಪೆನ್ ಡ್ರೈವ್ ವಿಚಾರವಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ್ರು.. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ್ರು ಸಾಂಕೇತಿಕವಾಗಿ ನಾವು ಕಾರ್ಯಕ್ರಮ ಮಾಡ್ತಾ ಇದ್ದೀವಿ.ನನಗೆ ಈಗ ೯೧ ವರ್ಷ,ನಮಗೆ ಯಾರ ಮೇಲೂ ದ್ವೇಷ ಇಲ್ಲ ನಮ್ಮದು ಪ್ರಾದೇಶಿಕ ಪಕ್ಷ ಉಳಿಸಬೇಕಾಗಿದೆ. ಬಿಜೆಪಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಹೋರಾಟ ಮಾಡ್ತಿದೆ.ನಾನು ಯಾರ ಬಗ್ಗೆಯೂ ಮಾತಾಡಲ್ಲ.ನಮ್ಮ ೧೯ ಶಾಸಕರು, ಎಂಟು ಜನ ಎಮ್ ಎಲ್ ಸಿಗಳು ಸೇರಿಸಿಕೊಂಡು ಸಭೆ ಮಾಡಿ,ಜಿಟಿಡಿ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಲಾಗಿದೆ ಈ ಕಮಿಟಿ ಇಡೀ ರಾಜ್ಯ ಪ್ರವಾಸ ಮಾಡಿ ವರದಿಯನ್ನ ನೀಡುತ್ತೆ ಆ ನಂತರ ವರದಿ ಬಗ್ಗೆ ಎಲ್ಲಾ ನಾಯಕರು ಸೇರಿ ತೀರ್ಮಾನ ಮಾಡಲಾಗುತ್ತೆ ಅಂತ ಮಾಹಿತಿ ನೀಡಿದ್ರು

ಅಪರೇಷನ್ ಹಸ್ತದ ಕಾವು ಶುರುವಾಗುತ್ತಲೆ ಎಚ್ಚೆತ್ತ ದೊಡ್ಡಗೌಡ್ರು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡ್ರು ಹಿಂದೆ ಏನಾದ್ರು ತಪ್ಪು ನಡೆದಿದ್ರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ.‌ ಕೊನೆಯ ಘಟ್ಟದಲ್ಲಿ ಪಕ್ಷವನ್ನ ಬಿಡಬೇಡೆ ಅಂತಾ ಕಾರ್ಯಕರ್ತರಿಗೆ ದೊಡ್ಡಗೌಡ್ರು ಬಾವುಕರಾಗಿ ಮನವಿ ಮಾಡಿದ್ರು.. ಇನ್ನೊಂದು ಪಕ್ಷವನ್ನು ನಂಬಿ ನಮ್ಮ ಪಕ್ಷದ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ.. ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಇಂತವರು ಹೋಗುತ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ.. ಇನ್ನೂ ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆಯೂ ಬಹಳ ಚರ್ಚೆ ಮಾಡಿದ್ದೇನೆ. ಪ್ರತಿಯೊಂದು ವಿಚಾರವನ್ನೂ ತಿಳಿದುಕೊಂಡಿದ್ದೇನೆ. ಒಬ್ಬರೇ ಒಬ್ಬರು ಕೂಡ ಪಕ್ಷ ಹೋಗುವುದಿಲ್ಲ. ಸೆಪ್ಟೆಂಬರ್ 10 ರಂದು ನಗರದ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದ್ರು.. ಲೋಕಸಭೆಗೆ ಯಾರು ಎಲ್ಲಿ ನಿಲ್ಲಬೇಕು ಅಂತ ಪಕ್ಷ ತೀರ್ಮಾನ ಮಾಡಲಿದೆನಾವು ಯಾರ ಸಹವಾಸಕ್ಕೂ ಹೋಗೋದಿಲ್ಲ ಅಂತಾ ಪರೋಕ್ಷವಾಗಿ ಮೈತ್ರಿ ಇಲ್ಲ ಅನ್ನೋದನ್ನ ಮತ್ತೆ ಸ್ಪಷ್ಟಪಡಿಸಿದ್ರು‌‌ ಮಾಜಿ ಪ್ರಧಾನಿ ದೇವೇಗೌಡ್ರು

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟ ಕಾಂಗ್ರೆಸ್