Publish Date: Mon, 28 Aug 2023 (17:42 IST)
Updated Date: Mon, 28 Aug 2023 (17:44 IST)
ಘರ್ ವಾಪ್ಸಿ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ನಮ್ಮ ಪಕ್ಷದಿಂದ ಹೋದವರು ಮಾತ್ರವಲ್ಲ. ನಮ್ಮ ಪಕ್ಷಕ್ಕೆ ಯಾರೇ ಬಂದರು ಸ್ವಾಗತ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ? ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ. ಇದುವರೆಗೂ ವಿಪಕ್ಷ ನಾಯಕನನ್ನೂ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಬಂದು ನೂರು ದಿನ ಆಗಿದೆ ಎಂದರು. ಇನ್ನು ಪ್ರಧಾನಿ ಬಿಜೆಪಿ ನಾಯಕರನ್ನ ಭೇಟಿ ಮಾಡದ ವಿಚಾರವಾಗಿ ಮಾತನಾಡಿ, ಮೋದಿನೇ ಇವರನ್ನ ಭೇಟಿ ಮಾಡಲು ಬರಬೇಡಿ ಅಂದಿದ್ರಂತೆ ಎಂದು ವ್ಯಂಗ್ಯವಾಡಿದ್ರು.