Publish Date: Mon, 07 Sep 2026 (16:05 IST)
Updated Date: Mon, 07 Sep 2026 (16:23 IST)
ಮೈಸೂರಿನಲ್ಲಿ ಜನರು ದಸರಾ ಆನೆಗಳ ಲದ್ದಿಯ ಮೇಲೆ ಹೆಜ್ಜೆ ಹಾಕುತ್ತಾರೆ ಅಥವಾ ಅದನ್ನು ತುಳಿಯುತ್ತಾರೆ. ಇದರ ಹಿಂದೆ ನಂಬಿಕೆಯೊಂದಿದೆ.
ದಸಾರ ಆನೆಗಳು ಹಾಕಿದ ಲದ್ದಿಣಿಯನ್ನು ತುಳಿಯುವುದರಿಂದ ರೋಗಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಜನರು ಏನಾದರೂ ರಸ್ತೆಯ ಅಕ್ಕಪಕ್ಕದಲ್ಲಿ ಆನೆ ಹಾಕಿರುವ ಸಗಣಿಯನ್ನು ಕಂಡರೆ ಅದನ್ನು ತುಳಿಯುತ್ತಾರೆ.
ಏಕೆಂದರೆ ಸ್ಥಳೀಯ ಸಂಪ್ರದಾಯ ಮತ್ತು ಜನಪ್ರಿಯ ನಂಬಿಕೆಯ ಪ್ರಕಾರ, ಅದರಲ್ಲಿ ಔಷಧೀಯ ಹಾಗೂ ಗುಣಪಡಿಸುವ ಗುಣಗಳಿವೆ ಎಂದು ಪರಿಗಣಿಸಲಾಗುತ್ತದೆ.
ಇಂದು ಸಂಜೆ ಮೈಸೂರಿನ ಕೆ.ಆರ್. ವೃತ್ತದಲ್ಲಿ ದಸರಾ ಆನೆಗಳಿಗೆ ನಡೆಸಲಾದ ಮೊದಲ ತೂಕದ ತಾಲೀಮಿನ ವೇಳೆ ಅದೇ ರೀತಿಯ ದೃಶ್ಯ ಕಂಡುಬಂತು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ