Select Your Language

Notifications

webdunia
webdunia
webdunia
webdunia

ಯುವ ದಸರಾ ಉದ್ಘಾಟಕರಾಗಿ ನಟ, ಡ್ಯಾನ್ಸರ್‌ ಪ್ರಭುದೇವಗೆ ಆಹ್ವಾನ

Mysore Yuva Dasara
Photo Credit X
ಮೈಸೂರು: ಈ ಬಾರಿಯ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಕಾರಿ ಯುವ ದಸರಾವನ್ನು ನೃತ್ಯ ನಿರ್ದೇಶಕ, ನಟ ಪ್ರಭುದೇವ್ ಅವರಮ್ಮಿ ಸ್ವಾಗತಿಸಲಾಗಿದೆ.   

ಈ ಬಾರಿಯ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ ನೀಡಲಾಗಿದೆ.

ಮೈಸೂರು ಜಿಲ್ಲಾಡಳಿತ ಮತ್ತು ಯುವ ದಸರಾ ಈ ವರ್ಷದ ಯುವ ದಸರಾವನ್ನು ಉದ್ಘಾಟಿಸಲು ಖ್ಯಾತ ನಟ, ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದೆ. 

ಪ್ರಭುದೇವ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಭೇಟಿ ಮಾಡಿದ ಯುವ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್ ಮತ್ತು ಕಾರ್ಯದರ್ಶಿಗಳಾದ ಅರುಣ್ ಮತ್ತು ಸತ್ಯಮೂರ್ತಿ ಅವರು ಆಹ್ವಾನ ನೀಡಿದರು. 

ಆಹ್ವಾನ ಸ್ವೀಕರಿಸಿರುವ ಪ್ರಭುದೇವ ಯುವ ದಸರಾ ಉದ್ಘಾಟನೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಪುರದಲ್ಲಿ ನಿಯಂತ್ರಣ ತಪ್ಪಿದ ಕಾರು; ಜನರಲ್ಲಿ ಆತಂಕ, Video