Select Your Language

Notifications

webdunia
webdunia
webdunia
webdunia

ಸಚಿವ ಎನ್.ಮಹೇಶ್ ಹೋಗಿದ್ದೆಲ್ಲಿ ಗೊತ್ತಾ?

webdunia
ಬೆಂಗಳೂರು , ಶುಕ್ರವಾರ, 12 ಅಕ್ಟೋಬರ್ 2018 (16:21 IST)
ಸಚಿವ ಸ್ಥಾನಕ್ಕೆ ಬಿಎಸ್ ಪಿ ಶಾಸಕ ಎನ್.ಮಹೇಶ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಹಲವು ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಏತನ್ಮಧ್ಯೆ ಎನ್.ಮಹೇಶ್ ಯಾರ ಕೈಗೆ ಸಿಗುತ್ತಿಲ್ಲ.

ಶಾಸಕ ಎನ್.ಮಹೇಶ್ ಅವರ ಮನವೊಲಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಮಹೇಶ್ ಯಾರ ಕೈಗೂ ಸಿಗುತ್ತಿಲ್ಲ. ಇದು ಹಲವು ಅನುಮಾನ ಹಾಗೂ ಚರ್ಚೆಗೆ ಕಾರಣವಾಗಿದೆ.

ಮಹೇಶ್ ರಾಜೀನಾಮೆಯಿಂದ ಸರಕಾರಕ್ಕೆ ಯಾವುದೇ ಹಾನಿಯಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ಅವರು ವಾಪಸ್ ಸಂಪುಟ ಸೇರಲಿದ್ದಾರೆ ಎಂದು ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರಮಟ್ಟದಲ್ಲಿ ರಚನೆ ಮಾಡಿರುವ ಮಹಾಘಟ ಬಂಧನ್ ನಿಂದ ಬಿಎಸ್ಪಿ ಹೊರ ಬಂದಿರುವುದು ಮಹೇಶ್ ರಾಜೀನಾಮೆಗೆ ಕಾರಣ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ 48 ಗಂಟೆಗಳ ಕಾಲ ಇಂಟರ್ ನೆಟ್ ಇಲ್ಲ; ಟೆನ್ಷನ್ ಬೇಡ, ಈ ಟಿಪ್ಸ್ ಫಾಲೋ ಮಾಡಿ ನೋಡಿ