Select Your Language

Notifications

webdunia
webdunia
webdunia
webdunia

ಮಾನವೀಯತೆ ಮೆರೆದ ಕಂಡಕ್ಟರ್ ಮಾಡಿದ ಕೆಲಸ ಏನು ಗೊತ್ತಾ?

ಮಾನವೀಯತೆ ಮೆರೆದ ಕಂಡಕ್ಟರ್ ಮಾಡಿದ ಕೆಲಸ ಏನು ಗೊತ್ತಾ?
ಹುಬ್ಬಳ್ಳಿ , ಮಂಗಳವಾರ, 10 ಜುಲೈ 2018 (15:50 IST)
ಸಾವಿರಾರು ರೂಪಾಯಿ ನಗದು, ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ಕಳ್ಕೊಂಡಿದ್ದ ಅಜ್ಜಿಗೆ ಇವೆಲ್ಲವನ್ನೂ ಮರಿಳಿಸಿ ಕೆಎಸ್ಆರ್ ಟಿಸಿ ಕಂಡಕ್ಟರೊಬ್ಬರು ಪ್ರಾಮಾಣಿಕತೆ ಮೆರಿದಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೆಸ್ಆರ್ ಟಿಸಿಯ ಹುಬ್ಬಳ್ಳಿಯ ಗ್ರಾಮಾಂತರ ಘಟಕ-2ರ ಕಂಡಕ್ಟರ್ ಶರೀಷಸಾಬ್ ಎಲ್. ನದಾಫ್ ಪ್ರಾಮಾಣಿಕತೆ ತೋರಿದಾರೆ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರಾಗಿ ನಿವೃತ್ತಿಯಾಗಿದ್ದ 85 ವರ್ಷದ ಡಾ. ಎಸ್. ವಿನೋದಾಬಾಯಿ ಎಂಬುವರು ಬೆಂಗಳೂರಿನಿಂದ ಕುಂದಗೋಳಕ್ಕೆ ತೆರಳುತ್ತಿದ್ದರು. ಇದಕ್ಕಾಗಿ ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಯರಗುಪ್ಪಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಹತ್ತಿದ್ರು. ಆದ್ರೇ, ಕುಂದಗೋಳದಲ್ಲಿಯೇ ಅಜ್ಜಿ ತಮ್ಮ ಬ್ಯಾಗ್ ಮರೆತು ಇಳಿದಿದ್ರು.

ಇದನ್ನ ಕಂಡಕ್ಟರ್ ಷರೀಫ್ ನದಾಫ್ ತೆಗೆದಿರಿಸಿದ್ರು. ಅಜ್ಜಿಯ ಕಡೆಯ ಸಂಬಂಧಿಕರು ಕಂಡಕ್ಟರ್ ನದಾಫ್ ಗೆ ಮೊಬೈಲ್ ಮೂಲಕ ಸಂಪರ್ಕಿಸ್ತಾರೆ. ಅಜ್ಜಿ ಡಾ. ವಿನೋದಾಬಾಯಿ ಬ್ಯಾಗ್ ನಲ್ಲಿ 40 ಸಾವಿರ ರೂ. ಒಂದು ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳು ಇರೋದಾಗಿ ಹೇಳ್ತಾರೆ. ಆದ್ರೇ, ಆವರೆಗೂ ಬ್ಯಾಗ್ ನಲ್ಲಿ ಏನಿದೆ ಅಂತಾನೇ ಕಂಡಕ್ಟರ್ ನದಾಫ್ ನೋಡಿರಲಿಲ್ಲ. ಅದೇ ರೂಟ್ ನಲ್ಲಿ ಮತ್ತೊಂದು ಸಾರಿ ಬಸ್ ಬಂದಾಗ ಕುಂದಗೋಳದಲ್ಲಿಯೇ ಕಂಡಕ್ಟರ್ ಷರೀಫ್ ನದಾಫ್, ಅಜ್ಜಿಯ ಬ್ಯಾಗ್ ನ ಮರಳಿಸಿದಾರೆ. ಬ್ಯಾಗ್ ಪರಿಶೀಲಿಸಿದಾಗ, ಅರಲ್ಲಿದ್ದ ಹಣ, ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸೇರಿ ಎಲ್ಲವೂ ಯಥಾವತ್ತಾಗಿದ್ದವು. ಇದರಿಂದಾಗಿ ತೀವ್ರ ಖುಷಿಯಾದ ಅಜ್ಜಿ ಡಾ. ಎಸ್ .ವಿನೋದಾಬಾಯಿ, ಕಂಡಕ್ಟರ್ ಷರೀಫ್ ನದಾಫ್ ಗೆ ನೂರ್ಕಾಲ ಚೆನ್ನಾಗಿರಪ್ಪ, ನಿನ್ನ ಪ್ರಾಮಾಣಿಕತೆ ನಿನಗೆ ಒಳ್ಳೇ ಹೆಸರು ತಂದ್ಕೊಂಡಲಿ ಅಂತ ಆಶೀರ್ವದಿಸಿದಾರಂತೆ. 5150 ನಂಬರ್ ಕಂಡಕ್ಟರ್ ಷರೀಫ್ ಎಲ್ ನದಾಫ್ ಈ ಪ್ರಾಮಾಣಿಕತೆ ಮೆರೆಯೋ ಮೂಲಕ ಕೆಎಸ್ಆರ್ ಟಿಸಿ ಬಗೆಗಿನ ನಂಬಿಕೆ ಹಾಗೂ ಗೌರವವನ್ನ ಮತ್ತಷ್ಟು ಹೆಚ್ಚಿಸಿದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷಗಳ ಬಳಿಕ ಸುರಿದ ಭರ್ಜರಿ ಮಳೆ: ನೆರೆ ಭೀತಿ