Publish Date: Tue, 02 Oct 2018 (19:53 IST)
Updated Date: Tue, 02 Oct 2018 (20:09 IST)
ರಾಷ್ಟ್ರದೆಲ್ಲೆಡೆ ಶಾಂತಿಧೂತ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಮಾರಂಭಕ್ಕೆ ಮೆರಗು ನೀಡುವಂತೆ ಸಿಎಂ ಘೋಷಣೆ ಮಾಡಿರುವುದು ಗಾಂಧಿ ಅನುಯಾಯಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ 30 ಜಿಲ್ಲಾ ಕೇಂದ್ರಗಳಲ್ಲಿ ಎರಡ್ಮೂರು ವಾರಗಳಲ್ಲಿ ಗಾಂಧಿ ಭವನಕ್ಕೆ ಬೇಕಾಗಿರುವ ಅಗತ್ಯವಾದ ನಿವೇಶನವನ್ನು ಗುರುತಿಸಬೇಕು. ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
16 ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಗುರುತಿಸಿರುವಂತೆ ಗಾಂಧಿ ಭವನ ನಿರ್ಮಾಣದ ಬಳಿಕ ವರ್ಷದ ಎಲ್ಲ ದಿನಗಳಲ್ಲಿ ಯುವಜನತೆಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.