Select Your Language

Notifications

webdunia
webdunia
webdunia
Sunday, 13 April 2025
webdunia

ಸಚಿವೆ ಜಯಮಾಲಾಗೆ ಸ್ವಪಕ್ಷದ ಕಾರ್ಯಕರ್ತರಿಂದಲೇ ಮುತ್ತಿಗೆ

ಸಚಿವೆ ಜಯಮಾಲಾ
ಉಡುಪಿ , ಮಂಗಳವಾರ, 2 ಅಕ್ಟೋಬರ್ 2018 (19:35 IST)
ಸಚಿವೆ ಜಯಮಾಲಾಗೆ ಸ್ವಪಕ್ಷದ ಕಾರ್ಯಕರ್ತರೇ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಡುಪಿಯ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಸಚಿವೆ ಜಯಮಾಲಾಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಸೆಪ್ಟಂಬರ್ 1ರ ಭಾರತ್ ಬಂದ್ ವೇಳೆ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಆಗಿತ್ತು. ಈ ಸಂದರ್ಭ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಸಚಿವೆ ಜಯಮಾಲ ಆರೋಗ್ಯ ವಿಚಾರಿಸಲು ಬಂದಿಲ್ಲ ಎಂದು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಗೆ ಒತ್ತಾಯಿಸಿದರು. ಸಮಜಾಯಿಷಿ ನೀಡಲು ಮುಂದಾದ ಜಯಮಾಲ ಅವರ ಮಾತಿಗೆ ಕಾರ್ಯಕರ್ತರು ಬೆಲೆಕೊಡದಿದ್ದಾಗ ನೀವು ಮಾಧ್ಯಮದವರನ್ನು ಮುಂದಿಟ್ಟುಕೊಂಡು ಹೆದರಿಸಲು ಬರಬೇಡಿ. ನನಗೆ ತುಂಬಾ ಕೋಪಬರುತ್ತದೆ ಎಂದು ಹೇಳಿ ಸಚಿವರು ಸ್ಥಳದಿಂದ ಕಾಲ್ಕಿತ್ತ ಘಟನೆ ಕೂಡ ನಡೆಯಿತು.



 

 

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಜಯಂತಿ ಆಚರಣೆ: ಕಸ ಗುಡಿಸಿದ ಶಾಸಕ, ಡಿಸಿ