Select Your Language

Notifications

webdunia
webdunia
webdunia
webdunia

ನೆಟ್ ಒಳಗೆ ಏನಿತ್ತು ಗೊತ್ತಾ? ಶಾಕಿಂಗ್!

ಗಾಂಜಾ
ನೆಟ್ ಒಳಗೆ ನಿಷೇಧಿತ ಮಾಡಿರುವ ವಸ್ತು ಪತ್ತೆಯಾಗಿರುವ ಘಟನೆ ನಡೆದಿದೆ. 

ಆತ ಸಾರ್ವಜನಿಕರಿಗೆ ಗೊತ್ತಾಗಬಾರದು ಎಂದು ತನ್ನ ತೋಟದಲ್ಲಿ ನೆಟ್ ಅಳವಡಿಸಿದ್ದನು. ಅದರಲ್ಲಿನ 5 ಗುಂಟೆ ಪ್ರದೇಶದಲ್ಲಿ ನಿಷೇಧಿತ ಬೆಳೆ ಬೆಳೆದಿದ್ದನು. ಆದರೆ ಚಾಲಾಕಿ ರೈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಕೋಲಾರದಲ್ಲಿ ಗಾಂಜಾ ತೋಟದ ಮೇಲೆ ದಾಳಿ ನಡೆಸಲಾಗಿದೆ. ಮಾಲೂರು ತಾಲೂಕಿನ ಜಂಗಾಲಹಳ್ಳಿ ಒಬ್ಬಟ್ಟಿ ಗ್ರಾಮದಲ್ಲಿ ದಾಳಿ ನಡೆಸಿದ್ದು, ಗ್ರಾಮದ ವೆಂಕಟರಮಣಪ್ಪ ತೋಟದ ಮೇಲೆ ದಾಳಿ ಆಗಿದೆ. ಈ ವೇಳೆ, 5 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಪತ್ತೆಯಾಗಿದೆ. 20 ಲಕ್ಷ ರುಪಾಯಿ ಬೆಲೆ ಬಾಳುವ ಗಾಂಜಾ ಬೆಳೆಯಲಾಗಿತ್ತು.

ಸಾರ್ವಜನಿಕರಿಗೆ ಗೊತ್ತಾಗದಂತೆ ಗಾಂಜಾ ಬೆಳೆಗೆ ನೆಟ್ ಅಳವಡಿಸಿದ್ದನು ರೈತ ವೆಂಕಟರಮಣಪ್ಪ. ಮಾಲೂರು ಸಿಪಿಐ ಸತೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

55 ದಿನಗಳ ನಂತರ ಪತ್ತೆಯಾಯ್ತು ಬೋಟ್ ಅವಶೇಷ!