ಬೆಂಗಳೂರು- ಬೆಕ್ಕು ಸಾಕುವ ವಿಚಾರವಾಗಿ ಲೋಕಾಯುಕ್ತ ಮೆಟ್ಟಿಲೇರಲಾಗಿದೆ.ಸಾಕು ಪ್ರಾಣಿಯಿಂದ ಅಕ್ಕ-ಪಕ್ಕದ ಜನರಿಗೆ ತೊಂದರೆಯಾಗುತ್ತೆ.ಮನೆಯಲ್ಲಿ 40 ಬೆಕ್ಕು, 5 ನಾಯಿ, ಪಕ್ಷಿ ಗಳನ್ನ ಓರ್ವ ಮಹಿಳೆ ಸಾಕಿರುವುದಕ್ಕೆ ಅಕ್ಕಪಕ್ಕದ ನಿವಾಸಿಗಳು ಲೋಕಾಯುಕ್ತ, ಪೊಲೀಸ್ ಠಾಣೆ, ಬಿಬಿಎಂಪಿ ಗೆ ದೂರು ನೀಡಿದ್ದಾರೆ.
ದಿನವೀಡಿ ಬೆಕ್ಕುಗಳು ಕೂಗುವ ಕಾರಣ ನಿದ್ದೆ ಬರ್ತಿಲ್ಲ,ವಾಸನೆಯಿಂದ ಸುಸ್ತಾಗಿದ್ದೇವೆ ಎಂದು ದೂರಿನಲ್ಲಿ ಜನರು ಉಲ್ಲೇಖಿಸಿದ್ದಾರೆ.ನಗರದ ಆರ್ ಟಿ ನಗರದಲ್ಲಿರುವ ಆನಂದ್ ಮನೆಗೆ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ದೌಡಯಿಸಿದ್ದಾರೆ.ಆದ್ರೆ ಬೆಕ್ಕುಗಳ ಮಾಲೀಕೆ ಯಾರನ್ನೂ ಮನೆಯೊಳಗೆ ಸೇರಿಸಿಲ್ಲ.ಸುತ್ತಲಿನ ಮನೆ ಮಾಲೀಕರಿಂದ ದೂರು ಹಿನ್ನಲೆ, ಅಧಿಕಾರಿಗಳ ಪರಿಶೀಲನೆ ನಡೆಸಲು ಬಂದಾಗ ಕ್ಯಾರೇ ಅಂದಿಲ್ಲ ಕಡೆಗೆ ಲೋಕಾಯುಕ್ತದಿಂದ ಆರೋಗ್ಯ ಇಲಾಖೆಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.