Select Your Language

Notifications

webdunia
webdunia
webdunia
webdunia

ಶಾಸಕ ಉಮೇಶ್ ಜಾಧವ ಸಹೋದರ ಹೇಳಿದ್ದೇನು ಗೊತ್ತಾ?

ಉಮೇಶ ಜಾಧವ
ಶಾಸಕ ಉಮೇಶ ಜಾಧವ್ ಬಿಜೆಪಿಗೆ ಸೇರ್ಪಡೆ ವಿಚಾರ ದಿನಕ್ಕೊಂದು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ. ಏತನ್ಮಧ್ಯೆ ಕಾಂಗ್ರೆಸ್ ನವರೇ ನಮ್ಮ ಮರ್ಯಾದೆ ಕಳೆದಿದ್ದಾರೆ. ಹೀಗಂತ ಶಾಸಕರ ಸಹೋದರ ದೂರಿದ್ದಾರೆ.

ಕಲಬುರಗಿ ಜಿಲ್ಲೆ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ ಎಲ್ಲಿಯೂ ಕೂಡ ಬಿಜೆಪಿಗೆ ಹೋಗುವೆ ಎಂದು ಹೇಳಿಲ್ಲ. ಸುಮ್ಮನೆ ಕಾಂಗ್ರೆಸ್ ನವರು ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಮನೆಯ ಮುಂದೆ ಬಂದು ನಮ್ಮ ಮರ್ಯಾದೆ ಕಳೆದಿದ್ದಾರೆ. ಇದರಿಂದ ಶಾಸಕ ಉಮೇಶ ಜಾಧವ್ ಅವರು ಬೇಸರಗೊಂಡಿದ್ದಾರೆ. ಹೀಗಂತ ಶಾಸಕರ ಸಹೋದರ ರಾಮಚಂದ್ರ ಜಾಧವ ಹೇಳಿದ್ದಾರೆ.

ಈಗಲೂ ಕೂಡ ಅವರು ಮುಂಬೈಯಲ್ಲಿ ಇದ್ದಾರೆ. ಇವತ್ತು ದಿನೇಶ ಗುಂಡುರಾವ್, ಈಶ್ವರ ಖಂಡ್ರೆ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು  ಕರೆ ಮಾಡಿದ್ದರು. ಶಾಸಕ ಉಮೇಶ ಜಾಧವ್ ಅವರಿಗೆ ಹೇಳಿ, ಅವರ ಯಾವುದೇ ಬೇಡಿಕೆ ಇದ್ದರೂ ಮಾತನಾಡೋಣ. ಅವರಿಗೆ ಸಭೆ ಹಾಜರಾಗಲು ಹೇಳಿ ಎಂದಿದ್ದಾರೆ.

ಒಂದೇ ಹೋಟೆಲ್ ನಲ್ಲಿ ಇದ್ದದ್ದಕ್ಕಾಗಿ ಬಿಜೆಪಿಯವರ ಜೊತೆ ಕಾಣಿಸಿಕೊಂಡಿರಬಹುದು ಎಂದ ಅವರು, ಮಾನಸಿಕವಾಗಿ ಶಾಸಕರು ಕುಗ್ಗಿದ್ದಾರೆ ಎಂದು ಕಲಬುರ್ಗಿಯಲ್ಲಿ ಉಮೇಶ ಜಾಧವ್  ಅವರ ಸಹೋದರ ರಾಮಚಂದ್ರ ಜಾಧವ್ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಮುದ್ರ ನೀರಿನಲ್ಲಿ ಓಡಿದ ಬಸ್ : ತಪ್ಪಿದ ಅನಾಹುತ