Select Your Language

Notifications

webdunia
webdunia
webdunia
webdunia

ದೋಷ ನಿವಾರಣೆ ನೆಪದಲ್ಲಿ ಕಳ್ಳ ಬಾಬನೊಬ್ಬ ಮಹಿಳೆಯರಿಗೆ ಮಾಡುತ್ತಿದ್ದದ್ದೇನು ಗೊತ್ತಾ?

ದೋಷ ನಿವಾರಣೆ ನೆಪದಲ್ಲಿ ಕಳ್ಳ ಬಾಬನೊಬ್ಬ ಮಹಿಳೆಯರಿಗೆ ಮಾಡುತ್ತಿದ್ದದ್ದೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 14 ಡಿಸೆಂಬರ್ 2018 (10:29 IST)
ಬೆಂಗಳೂರು : ದೋಷ ನಿವಾರಣೆ ನೆಪ  ಹೇಳಿ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ತನ್ನ ಚಟ ತೀರಿಸಿಕೊಳ್ಳುತ್ತಿದ್ದ ವೇಷಧಾರಿ ಬಾಬ ಒಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿ ಹಾಕಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.


ಈತ ಸಮಸ್ಯೆಯೆಂದು ಬರುತ್ತಿದ್ದ ಮಹಿಳೆಯರಿಗೆ ದೋಷವಿದೆ ಎಂದು ತಿಳಿಸಿ, ಆ ದೋಷ ನಿವಾರಣೆ ಮಾಡುತ್ತೇನೆಂದು ಹೇಳಿ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳುತ್ತಿದ್ದಾನೆ.


ಕರಾವಳಿ ಭಾಗದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವ ಬಾಬಾ ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನಿರಂಜನ್ ಕುಜ್ಜ ಎಂಬವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇಂತಹ ಸ್ವಾಮೀಜಿಗಳಿಂದ ಎಚ್ಚರವಾಗಿರುವಂತೆ ಸಂದೇಶ ನೀಡಿದ್ದಾರೆ.


ಈ ಕಳ್ಳ ಬಾಬಾನ ಬಗ್ಗೆ ಇದುವರೆಗೂ ಪೊಲೀಸರಿಗೆ ಯಾವುದೇ ದೂರು ಬಂದಿರದ ಕಾರಣದಿಂದ  ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ಧ ಕಿಡಿಕಾರಿದ ಜೆಡಿಎಸ್ ಯುವ ಮುಖಂಡ