Publish Date: Tue, 25 Jun 2024 (20:06 IST)
Updated Date: Tue, 25 Jun 2024 (20:10 IST)
ಕೊಪ್ಪಳ: ಕೆಲಸಕ್ಕೆ ಕರೆದುಕೊಂಡು ಹೋದ ವ್ಯಕ್ತಿ ಕೂಲಿಯಲ್ಲಿ 200 ರೂಪಾಯಿ ಬಾಕಿ ಉಳಿಸಿದ್ದಕ್ಕೆ ಕೋಪಗೊಂಡು ವ್ಯಕ್ತಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ರೇಣುಕಮ್ಮ (62) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ಮಹೇಶ ಗೊಲ್ಲರ ಎಂಬಾತನನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ: ಕೊಲೆಯಾದ ರೇಣುಕಮ್ಮ ಪತಿ ಅಳ್ಳಪ್ಪ ಆರೋಪಿ ಮಹೇಶ ಸೇರಿದಂತೆ ಕೆಲವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕೆಲಸ ಕೊಟ್ಟಿದ್ದಾರೆ. ನಿತ್ಯ ₹650 ಕೂಲಿ ಇದ್ದು ಒಟ್ಟು ನಾಲ್ಕು ದಿನ ಮಹೇಶ ಕೆಲಸ ಮಾಡಿದ್ದ. ಇದರಲ್ಲಿ ಅಳ್ಳಪ್ಪ ₹200 ಉಳಿಸಿಕೊಂಡಿದ್ದರು.
ಬಾಕಿ ಉಳಿದ ಹಣವನ್ನು ನೀಡುವಂತೆ ಮಹೇಶ, ಅಳ್ಳಪ್ಪ ಜತೆ ಜಗಳವಾಡಿದ್ದಾನೆ. ಸೋಮವಾರ ರಾತ್ರಿ ಕೂಡ ಇದೇ ವಿಷಯಕ್ಕೆ ಮತ್ತೆ ನಡೆದ ಜಗಳ ಬಿಡಿಸಲು ಬಂದ ಅಳ್ಳಪ್ಪನ ಪತ್ನಿ ರೇಣುಕಮ್ಮಳಿಗೆ ಮಹೇಶ ಕಟ್ಡಿಗೆಯಿಂದ ಬಲವಾಗಿ ಹೊಡೆದಿದ್ದರಿಂದ ರೇಣುಕಮ್ಮ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತರವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.