Select Your Language

Notifications

webdunia
webdunia
webdunia
webdunia

ಮುಸ್ಲಿಮರ ಕೆಲಸವನ್ನ ತಲೆಬಾಗಿ ಮಾಡಬೇಕೆಂದ ಜಮೀರ್‌ಗೆ ನಿಷೇಧ ಹೇರಬೇಕು: ಆರ್‌ ಅಶೋಕ್ ಕಿಡಿ

R Ashok

Sampriya

ಬೆಂಗಳೂರು , ಮಂಗಳವಾರ, 25 ಜೂನ್ 2024 (17:00 IST)
Photo Courtesy X
ಬೆಂಗಳೂರು: ತಮ್ಮ ತುಷ್ಟೀಕರಣ ರಾಜಕಾರಣದ ತೃಷೆಗಾಗಿ ಸಾಂವಿಧಾನಿಕ ಹುದ್ದೆಗಳಿಗೆ ಪದೇ ಪದೇ ಅಪಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಅವರುಮತ್ತೊಮ್ಮೆ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬೀದರ್‌ನಲ್ಲಿ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಮರ ಮತಗಳಿಂದ ಗೆದ್ದಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಮತಗಳಿಂದ ಜಯ ಗಳಿಸಿರುವ ಸಾಗರ್ ಖಂಡ್ರೆ ನಮ್ಮ ಕೆಲಸವನ್ನು ಮಾಡಲೇ ಬೇಕು. ನಾನು ಮಾಡಿಸುತ್ತೇನೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಆಕ್ರೋಶ ಹೊರ ಹಾಕಿರುವ ವಿಪಕ್ಷ ನಾಯಕ ಆರ್‌ ಅಶೋಕ್ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ತುಷ್ಟೀಕರಣ ರಾಜಕಾರಣದ ತೃಷೆಗಾಗಿ ಸಾಂವಿಧಾನಿಕ ಹುದ್ದೆಗಳಿಗೆ ಪದೇ ಪದೇ ಅಪಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಅವರು ಸಂವಿಧಾನಕ್ಕೆ ಅಪಚಾರ ಮತ್ತೊಮ್ಮೆ ಎಸಗಿದ್ದಾರೆ.

ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿ ಶಾಸಕರು ತಲೆಬಾಗಬೇಕು ಎಂದು ಸ್ಪೀಕರ್ ಹುದ್ದೆಗೆ ಅಪಚಾರ ಎಸಗಿದ್ದ ಜಮೀರ್, ಈಗ ಮುಸ್ಲಿಮರ ಕೆಲಸವನ್ನ ತಲೆಬಾಗಿ ಮಾಡಬೇಕು ಎಂದು ದುರಹಂಕಾರದ ಮಾತುಗಳನ್ನು ಆಡುವ ಮೂಲಕ ಸಚಿವ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ.

ಮೊದಲು ಮಾಡಿದ ತಪ್ಪಿಗೇ ಈವರೆಗೆ ಜನತೆಯ ಕ್ಷಮೆ ಕೇಳದ ಜಮೀರ್‌ ಅಹ್ಮದ್‌ ಈಗ ಮತ್ತೊಮ್ಮೆ ದರ್ಪ ಪ್ರದರ್ಶನ ಮಾಡಿರುವುದು ಅವರ ಸಂಸ್ಕೃತಿ ತೋರಿಸುತ್ತದೆ. ಇಂತಹ ಸಂಸ್ಕೃತಿ ಹೀನರು, ಸಂವಿಧಾನ ವಿರೋಧಿಗಳು, ವಿಧಾನಸಭೆ ಪ್ರವೇಶಕ್ಕೇ ಅನರ್ಹರಾಗಿದ್ದು, ಜಮರ್ ಅವರಿಗೆ ನಿಷೇಧ ಹೇರಬೇಕು ಎಂದು ಸ್ಪೀಕರ್ ಯುಟಿ ಖಾದರ್‌
 ಅವರಲ್ಲಿ ಮನವಿ ಮಾಡುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ಕೆಎಂಎಫ್‌ನಿಂದ ನಿರ್ಧಾರ: ಸಿಎಂ ಸಿದ್ದರಾಮಯ್ಯ