Select Your Language

Notifications

webdunia
webdunia
webdunia
webdunia

ಚುನಾವಣಾ ಪ್ರಚಾರದ ವೇಳೆ ಎದೆನೋವು: ಸಚಿವ ಜಮೀರ್ ಅಹ್ಮದ್ ಆಸ್ಪತ್ರೆಗೆ ದಾಖಲು

Zameer Ahmad

Sampriya

ಚಿತ್ರದುರ್ಗ , ಸೋಮವಾರ, 15 ಏಪ್ರಿಲ್ 2024 (19:05 IST)
Photo Courtesy X
ಚಿತ್ರದುರ್ಗ: ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಚಿವ ಜಮೀರ್ ಅಹ್ಮದ್‌ಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು  ಜಿಲ್ಲೆಗೆ ಆಗಮಿಸಿದ್ದರು. ಅಂತೆಯೇ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು,  ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಯಲ್ಲಿ ಹೃದಯ ತಜ್ಞರಾದ ಡಾ.ಕಾರ್ತಿಕ್, ಡಾ.ಸುಜಯ್ ರಿಂದ ತಪಾಸಣೆ ನಡೆಸಲಾಯಿತು. ಬಳಿಕ ತುರ್ತು‌ಚಿಕಿತ್ಸಾ ಘಟಕದಲ್ಲಿ ತಪಾಸಣೆ ಮುಂದುವರಿದಿದೆ. ಇಸಿಜಿ, ಇಕೋ ಪರೀಕ್ಷೆ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೂ ಕರಾವಳಿಗೂ ಅವಿನಾಭಾವ ನಂಟು: ಮಂಗಳೂರು ರೋಡ್‌ ಶೋ ಬಣ್ಣಿಸಿದ ಮೋದಿ