Select Your Language

Notifications

webdunia
webdunia
webdunia
webdunia

ತಂಗಿಯನ್ನ ಚುಡಾಯಿಸಿದ್ದಕ್ಕೆ ಅಣ್ಣಂದಿರು ಏನ್ ಮಾಡುದ್ರು ಗೊತ್ತ ?

webdunia
ಹುಬ್ಬಳ್ಳಿ , ಶುಕ್ರವಾರ, 24 ಜೂನ್ 2022 (12:21 IST)
ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ.

ತಂಗಿಯನ್ನ ಚುಡಾಯಿಸಿದ ಕಾರಣಕ್ಕಾಗಿ ಯುವಕನಿಗೆ ಯುವತಿಯ ಅಣ್ಣಂದಿರಿಬ್ಬರು ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ.

ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಚಂದ್ರಶೇಖರ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ. 

ಇರಿತಕ್ಕೊಳಗಾದ ಚಂದ್ರಶೇಖರ್ ಅದೇ ನಗರದ ಕಿರಣ್ ಹಾಗೂ ಅಭಿ ಎನ್ನುವವರ ತಂಗಿಯನ್ನು ಚುಡಾಯಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಅಣ್ಣಂದಿರೂ ಚಂದ್ರಶೇಖರ್ಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.

ಎಷ್ಟು ಹೇಳಿದರೂ ಕೇಳದೇ ಇದ್ದರಿಂದ ಕೋಪಗೊಂಡ ಇಬ್ಬರು ಚಂದ್ರಶೇಖರ್ಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟದಿಂದ ಕಿತ್ತು ಹಾಕಿ : ಸಿದ್ದರಾಮಯ್ಯ