ಪಿತೋರ್ಘಡ್ : 12 ವರ್ಷದ ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡ್ನ ಪಿತೋರ್ಘಡ್ದ ಧಾರುಚುಲದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ 36 ವರ್ಷದ ಯುವಕನೊಂದಿಗೆ ಬಾಲಕಿಯ ವಿವಾಹ ಮಾಡಿದ್ದಳು.
ಪ್ರಸ್ತುತ ಈ 12 ವರ್ಷದ ಅಪ್ರಾಪ್ತ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು , ಆಕೆಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಇದು ಈಕೆಗೆ ಎರಡನೇ ವಿವಾಹವಾಗಿತ್ತು. ಮೊದಲ ವಿವಾಹ ಕೌಟುಂಬಿಕ ಕಲಹದಿಂದಾಗಿ ಮುರಿದು ಬಿದ್ದಿತ್ತು.
ಇದಾದ ಬಳಿಕ ಆಕೆಗೆ ತಾಯಿ 36 ವರ್ಷದ ಯುವಕನೊಂದಿಗೆ ಮತ್ತೊಂದು ವಿವಾಹ ಮಾಡಿದ್ದಾಳೆ ಎಂದು ಪಿತೋರ್ಘಡ್ದ ಸೂಪರಿಂಟೆಂಡ್ ಆಫ್ ಪೊಲೀಸ್ ಲೋಕೇಶ್ವರ್ ಸಿಂಗ್ ಹೇಳಿದ್ದಾರೆ.
ಬಾಲಕಿಯ ತಾಯಿಯನ್ನು ಬುಧವಾರ ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ 5/6 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅಪ್ರಾಪ್ತ ಬಾಲಕಿಯ ಪತಿಯನ್ನು ಒಂದೆರಡು ದಿನಗಳ ಹಿಂದೆ ಬಂಧಿಸಲಾಯಿತು ಮತ್ತು ಐಪಿಸಿಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ),
ಪೋಕ್ಸೊ ಕಾಯ್ದೆಯ 5 (1) 6 ಮತ್ತು ಬಾಲ್ಯ ವಿವಾಹ ತಡೆ ಕಲಂ 9 (ಮಗುವಿಗೆ ಮದುವೆಯಾದ ಪುರುಷನಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಸಿಂಗ್ ಹೇಳಿದರು ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಪೊಲೀಸರಿಗೆ ದೂರು ನೀಡಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು.