Publish Date: Fri, 24 Jun 2022 (13:33 IST)
Updated Date: Fri, 24 Jun 2022 (13:18 IST)
ಲಕ್ನೋ : ಮದುವೆ ಮೆರವಣಿಗೆ ಸಂದರ್ಭದಲ್ಲಿ ವರನೊಬ್ಬ ಖುಷಿಯಿಂದ ಗುಂಡು ಹಾರಿಸಿದಾಗ ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮನೀಶ್ ಮಧೇಶಿಯಾ ವರ ಹಾಗೂ ಬಾಬು ಲಾಲ್ ಯಾದವ್ ಮೃತ ಸ್ನೇಹಿತ. ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ಈತನನ್ನು ಕುದುರೆ ಮೇಲೆ ಮರೆವಣಿಗೆ ಮಾಡಿದ್ದರು. ಆ ಸಂದರ್ಭದಲ್ಲಿ ಸುತ್ತಲೂ ಜನರು ಕೂಡಿಕೊಂಡಿದ್ದರು.
ಖುಷಿಯಿಂದ ಸಂಭ್ರಮಿಸುತ್ತಿದ್ದ ವರ ಮನೀಶ್ ಮಧೇಶಿಯಾ ತನ್ನ ಬಳಿ ಇದ್ದ ಸ್ನೇಹಿತ ಯಾದವ್ ಅವರ ಗನ್ನ್ನು ತೆಗೆದು ಗುಂಡು ಹಾರಿಸಿದ್ದಾನೆ. ಅಲ್ಲೇ ಇದ್ದ ಬಾಬು ಲಾಲ್ ಯಾದವ್ಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಬಾಬು ಲಾಲಾ ಯಾದವ್ ಯೋಧರಾಗಿದ್ದರು. ಈ ಘಟನೆ ಸಂಬಂಧಿಸಿದಂತೆ ಕ್ಯಾಮರಾದಲ್ಲಿ ದಾಖಲಾಗಿದೆ.
ತಕ್ಷಣ ಯಾದವ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.