Select Your Language

Notifications

webdunia
webdunia
webdunia
webdunia

ಬಸ್ ಆರಂಭಕ್ಕೆ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

ಬಸ್ ಆರಂಭಕ್ಕೆ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಹುಬ್ಬಳ್ಳಿ , ಮಂಗಳವಾರ, 19 ಮೇ 2020 (19:30 IST)
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ‌ ಲಾಕ್ ಡೌನ್ ಜಾರಿಯಾಗಿದ್ದು, ಕೇಂದ್ರ ಸರ್ಕಾರ ಕೊಂಚ ಸಡಿಲಿಕೆಯನ್ನು ಮಾಡಿದೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ ಬಸ್ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದು, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ನಗರ ಹಾಗೂ ಹುಬ್ಬಳ್ಳಿ ಉಪನಗರಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರ ಪ್ರಾರಂಭವಾಗಿದೆ.

ನಗರ ಸಾರಿಗೆ ಬಸ್ ಸಾರಿಗೆ ಬಸ್ ಗಳು ಸಿಬಿಟಿ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿವೆ. 
ಗ್ರಾಮೀಣ ಸಾರಿಗೆ ಬಸ್ ಗಳು ಹಳೇ ಬಸ್ ನಿಲ್ದಾಣ ಹಾಗೂ ದೂರದ ಬೆಂಗಳೂರು, ಬೆಳಗಾವಿ, ಸೇರಿದಂತೆ ಅನ್ಯ ಜಿಲ್ಲೆಗಳಿಗೆ ತೆರಳುವ ಬಸ್ ಗಳು ಹೊಸ ಬಸ್ ನಿಲ್ದಾಣದಿಂದ‌ ಸಂಚರಿಸುತ್ತಿವೆ.

ಅವಳಿ‌ ನಗರದ ಮಧ್ಯೆ ಸಂಚರಿಸುವ ‌ಬಿ.ಆರ್.ಟಿ.ಎಸ್‌ ಗಳಿಗೆ ಮಾತ್ರ ಅವಕಾಶ ನೀಡಲಾಗಿಲ್ಲ. ಹೀಗಾಗಿ ಬಿ‌ಆರ್ ಟಿಎಸ್  ಹೊರತು ಪಡಿಸಿ ಹುಬ್ಬಳ್ಳಿಯ ನಗರ, ಉಪನಗರ ಬಸ್ ಸಂಚಾರ ಕೂಡ ಪ್ರಾರಂಭಗೊಂಡಿದ್ದು, ಜನರಿಂದ ಉತ್ರಮ ಸ್ಪಂದನೆ ಸಿಕ್ಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಡುವೆ ಈ ಜಿಲ್ಲೆಯಿಂದ ಬಸ್ ಸಂಚಾರ ಆರಂಭ