Select Your Language

Notifications

webdunia
webdunia
webdunia
webdunia

ಎಂಪಿ ಚುನಾವಣೆ: ಮಂಡ್ಯಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿ ಎಂದವರಾರು ಗೊತ್ತಾ?

ಎಂಪಿ ಚುನಾವಣೆ: ಮಂಡ್ಯಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿ ಎಂದವರಾರು ಗೊತ್ತಾ?
ಮಂಡ್ಯ , ಗುರುವಾರ, 10 ಜನವರಿ 2019 (15:58 IST)
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಬೇಕೆಂದು ಆಗ್ರಹ ಕೇಳಿಬಂದಿದೆ. ಮಂಡ್ಯ ಜೆಡಿಎಸ್ ಜಿಲ್ಲಾ ಪಂಚಾಯ್ತಿ ಸದಸ್ಯರು ಈ ರೀತಿ ಒತ್ತಡ ಹಾಕಿದ್ದಾರೆ.

ನಿಖಿಲ್ ಕುಮಾರ್ ಮಂಡ್ಯ ಜಿಲ್ಲೆಯ ಜೊತೆ  ನಿಕಟ ಸಂಪರ್ಕ ಹೊಂದಿದ್ದಾರೆ. ರೈತರ ಆತ್ಮಹತ್ಯೆ ಆದಾಗ, ಅಪಘಾತಗಳಾದಾಗ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಜೆಡಿಎಸ್ ಬಲರ್ಧನೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಈ ಬಾರಿ ಟಿಕೆಟ್ ಕೊಡಬೇಕು. ಹೀಗಂತ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ವಿಶ್ವನಾಥ್ ರನ್ನು ಭೇಟಿ ಮಾಡಿ ನಾವು ಮನವಿ ಸಲ್ಲಿಸಿದ್ದೇವೆ.

ಅವರಿಗೆ ಟಿಕೆಟ್ ಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಂಡ್ಯ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದು, ಅವ್ರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಜ.14ರಂದು ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ, ಮಹಾರಥೋತ್ಸವ