Select Your Language

Notifications

webdunia
webdunia
webdunia
webdunia

ವಿಧಾನಸೌಧದಲ್ಲಿ ಜನಾರ್ದನ ರೆಡ್ಡಿಗೆ ಶುಭ ಕೋರಿದ ಡಿಕೆಶಿ

ಅದಿವೇಶನ
ಬೆಂಗಳೂರು , ಸೋಮವಾರ, 22 ಮೇ 2023 (14:15 IST)
ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಜನಾರ್ದನ ರೆಡ್ಡಿಯವರಿಗೆ ಡಿಸಿಎಂ ಡಿಕೆ ಶಿವಕುಮಾರ್  ಶುಭ ಕೋರಿದ್ದಾರೆ.
 
ವಿಧಾನಸೌಧದ ಒಳಗೆ ಶಾಸಕರ ಫೋಟೋ ತೆಗೆಸಲು ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಬಂದಿದ್ದ ಶಾಸಕರು ವಿವಿಧ ಐಡಿ ಕಾರ್ಡ್ಗಳಿಗೆ ಫೋಟೋ ತೆಗೆಸಿಕೊಂಡರು. ಇದಲ್ಲದೆ ಆಡಳಿತ ಮತ್ತು ವಿಪಕ್ಷ ಮೊಗಸಾಲೆಯಲ್ಲಿ ಫೋಟೋ ತೆಗೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಇಂದಿನಿಂದ ಆರಂಭಗೊಂಡ ಅದಿವೇಶನದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ನೂತನ ಸಚಿವ ಸಂಪುಟ ರಚನೆಯಾಗಲಿದೆ. ಶಾಸಕರಿಗೆ ಪ್ರಮಾಣ ವಚನ ಭೋಧಿಸಲು ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆಗೆ ನಾನ್ಯಾಕೆ ಹೇಳಲಿ ಎಂದ ದೇಶಪಾಂಡೆ