Publish Date: Wed, 17 May 2023 (16:50 IST)
Updated Date: Wed, 17 May 2023 (17:19 IST)
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಮೂರು ದಿನಗಳು ಕಳೆದಿವೆ. ಆದರೂ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್ ಇದುವರೆಗೂ ಸಿಎಂ ಯಾರು ಎನ್ನುವುದನ್ನು ಘೋಷಣೆ ಮಾಡಿಲ್ಲ. ಸಿಎಂ ಕುರ್ಚಿಗಾಗಿ ಪಟ್ಟು ಅಂದ್ರೆ ಪಟ್ಟು. ಸಿದ್ದರಾಮಯ್ಯ ಬಿಡುತ್ತಿಲ್ಲ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಸೈಡಿಗೆ ಸರಿಯುತ್ತಿಲ್ಲ. ಹೀಗಾಗಿ ಹೈಕಮಾಂಡ್ಗೂ ಸಿಎಂ ಆಯ್ಕೆ ಕಗ್ಗಂಟಾಗಿದೆ. ನಾನು ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿರುವ ಕಾರಣ ನನ್ನನ್ನು ಮುಖ್ಯಮಂತ್ರಿ ಮಾಡಬೇಕು. 50:50 ಸೂತ್ರವನ್ನು ನಾನು ಯಾವ ಗ್ಯಾರಂಟಿ ಮೇಲೆ ಒಪ್ಪಲಿ? ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಏನಾಗಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ರಾಜಸ್ಥಾನದಲ್ಲಿ 50:50 ಸೂತ್ರ ಒಪ್ಪಿದ್ದ ಪೈಲಟ್‍ಗೆ ಅಧಿಕಾರ ಸಿಕ್ಕಿಲ್ಲ. ಖುದ್ದು ರಾಹುಲ್ ಗಾಂಧಿಯೇ ಭರವಸೆ ನೀಡಿದ್ದರು. ಉಳಿದ ಎರಡೂವರೆ ವರ್ಷದ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿ. ಬೇಕಿದ್ದರೆ ಈ ವಿಚಾರದಲ್ಲಿ ನಾನು ಒಪ್ಪಂದಕ್ಕೆ ಸಹಿ ಹಾಕುತ್ತೇನೆ. 2.5 ವರ್ಷ ನಂತರದ ರಾಜೀನಾಮೆಗೆ ಈಗಲೇ ಪತ್ರ ಬರೆಸಿಕೊಳ್ಳಿ. ಸಿದ್ದರಾಮಯ್ಯ ಹೇಳುವ 20 ಶಾಸಕರನ್ನು ಮಂತ್ರಿ ಮಾಡಲು ಸಹ ನಾನು ಸಿದ್ಧ. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಕೊಂಡು ಸಹಿ ಮಾಡಲಿ. ನಾನು ಮಾತಿಗೆ ತಪ್ಪುವವನಲ್ಲ ಅಂತ ಸಿಎಂ ಹುದ್ದೆ ಇತ್ಯರ್ಥವಾಗೋವರೆಗೂ ದೆಹಲಿ ಬಿಟ್ಟು ವಾಪಸ್ ಬೆಂಗಳೂರಿಗೆ ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ