Select Your Language

Notifications

webdunia
webdunia
webdunia
Sunday, 6 April 2025
webdunia

ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ?

ರಮೇಶ್ ಜಾರಕಿಹೊಳಿ
ಬೆಳಗಾವಿ , ಭಾನುವಾರ, 8 ಮೇ 2022 (13:41 IST)
ಬೆಳಗಾವಿ : ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಹಕಾರಿ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ ಎಂಬ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಹುಕಾರ ಪಾಪರ್ ಆಗ್ತಿದ್ದಾರೆ.
 
ಅದಕ್ಕೆ ಸಿಎಂ, ಗೃಹಸಚಿವರು ಉತ್ತರಿಸಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹುಕಾರರೆಲ್ಲರೂ ಪಾಪರ್ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲಾ ಪಾಪರ್ ಮಾಡಿಕೊಳ್ಳಿ ಎಂದು ಮ್ಯಾಚ್ ಫಿಕ್ಸಿಂಗ್ ನಡೆಸುತ್ತಿದ್ದಾರೆ.

ಸಿಎಂ, ಸಹಕಾರ ಸಚಿವರು ಏನು ಮಾಡುತ್ತಿದ್ದಾರೆ? ಬಿಡಿಸಿಸಿ ಬ್ಯಾಂಕ್ಗೆ 300 ಕೋಟಿನೋ, 600 ಕೋಟಿನೋ ಎಷ್ಟು ಬರಬೇಕು ಗೊತ್ತಿಲ್ಲ. ಪೇಪರ್ನಲ್ಲಿ ಬಂದಿದ್ದ ಜಾಹೀರಾತು ನಾನು ನೋಡಿದೆ. ನಮ್ಮ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದಾಖಲೆ ಕಳಿಸುವುದಾಗಿ ಹೇಳಿದ್ದಾರೆ.

ಮೊದಲು ಆ ಪಾಪರ್ ಸಾಹುಕಾರ ಭಿಕ್ಷುಕ ಆಗಿರುವ ಬಗ್ಗೆ ಸೋಮಶೇಖರ್, ಸಿಎಂ ಉತ್ತರ ಕೊಡಲಿ. ಆಮೇಲೆ ನಾನು ಮಾತನಾಡುತ್ತೇನೆ ಎಂದರು.  ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಸಾಮಾನ್ಯ ವ್ಯಕ್ತಿಯಲ್ಲ. ಕೇಂದ್ರದ ಮಾಜಿ ಮಂತ್ರಿ, ಹಾಲಿ ಶಾಸಕರಿದ್ದಾರೆ.

ಮಂತ್ರಿಸ್ಥಾನಕ್ಕೆ 50 ರಿಂದ 100 ಕೋಟಿ ಫಿಕ್ಸ್ ಎಂದು ಹೇಳಿದ್ದಾರೆ. ಇಂಜಿನಿಯರ್, ಪಿಎಸ್ಐ ಪೋಸ್ಟ್ಗಳಿಗೆ ರೇಟ್ ಫಿಕ್ಸ್ ಆಗಿದೆ. ಸಿಎಂ ಸ್ಥಳದಿಂದ ಜವಾನ್ ಕೆಲಸದವರೆಗೂ ರೇಟ್ ಫಿಕ್ಸ್ ಆಗಿದೆ. 40 ಪರ್ಸೆಂಟ್ ಕಮಿಷನ್ ಫಿಕ್ಸ್ ಆಗಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಶಿಕ್ಷಣಕ್ಕೆ 700 ಕೋಟಿ ಮೀಸಲಿಟ್ಟ ಗೋಯಲ್