ಬೆಂಗಳೂರು: ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿಕೆ ಸುರೇಶ್ ಅವರು ಮುನಿರತ್ನ ಅವರೇ ಗೂಂಡಾಗಳನ್ನು ಕರೆಸಿಕೊಂಡ ಈ ದಾಳಿ ನಡೆಸಿದ್ದಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.
ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ಡಿಕೆ ಸುರೇಶ್, ಡಿಕೆ ಶಿವಕುಮಾರ ಅವರ ಕಡೆಯಿಂದ ನನ್ನ ಮೇಲೆ ಆಸೀಡ್ ದಾಳಿ ನಡೆದಿದೆ ಎಂದು ಮುನಿರತ್ನ ಅವರು ಜೀವಬೆದರಿಕೆಯಿದೆ ಎಂದು ಆರೋಪ ಮಾಡಿದ್ದರು.
ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಮುನಿರತ್ನ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆಂಬ ವರದಿ ಬಂದಿದೆ. ಅವರೇ ಗೂಂಡಾಗಳನ್ನು ಬಿಟ್ಟು ಈ ರೀತಿ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈಗಾಗಲೇ ಅವರ ವ್ಯಕ್ತಿತ್ವ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ಹಾಗಾಗಿ ಈ ಆರೋಪವನ್ನು ನನ್ನ ಮೇಲೆ ಹಾಕುವ ನೈತಿಕತೆ ಬಿಜೆಪಿಯವರಿಗಿಲ್ಲ. ಕುಸುಮಾ ಅವರನ್ನು ಎಂಎಲ್ ಮಾಡಲು ಈ ರೀತಿ ದಾಳಿ ನಡೆಸಲಾಗಿದೆ ಎಂಬ ಮುನಿರತ್ನ ಆರೋಪಕ್ಕೆ ಬೆಂಗಳೂರಿಗೆ ಬಂದ್ಮೇಲೆ ಉತ್ತರಿಸುವುದಾಗಿ ಹೇಳಿದರು.