Webdunia - Bharat's app for daily news and videos

Install App

ಯೋಗ ಮಾಡುವಾಗ ಥಕ ಥೈ: ಟ್ರೋಲ್ ಆದ ಡಿಕೆ ಶಿವಕುಮಾರ್

Krishnaveni K
ಶನಿವಾರ, 22 ಜೂನ್ 2024 (10:56 IST)
Photo Credit: Facebook

ಬೆಂಗಳೂರು: ನಿನ್ನೆ ವಿಶ್ವ ಯೋಗ ದಿನಾಚರಣೆ ನಿಮಿತ್ತ ರಾಜ್ಯ ನಾಯಕರೂ ಯೋಗ ಮಾಡಿ ಗಮನ ಸೆಳೆದಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್ ಮುಂತಾದವರು ಆಯಾಯ ಕಾರ್ಯಕ್ರಮದಲ್ಲಿ ಯೋಗ ಮಾಡಿದ್ದಾರೆ.


ಆದರೆ ಯೋಗ ದಿನಾಚರಣೆ ದಿನ ಯೋಗ ಮಾಡಲು ಹೋಗಿ ಡಿಸಿಎಂ ಡಿಕೆ ಶಿವಕುಮಾರ್ ಟ್ರೋಲ್ ಗೊಳಗಾಗಿದ್ದಾರೆ. ನಿನ್ನೆ ವಿಧಾನಸೌಧದ ಮುಂಭಾಗ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ವೃಕ್ಷಾಸನ ಭಂಗಿಯಲ್ಲಿ ನಿಂತುಕೊಳ್ಳಲು ಡಿಕೆ ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಸಚಿವರು ತುಂಬಾನೇ ಕಷ್ಟಪಟ್ಟರು. ಕಾಲು ಮೇಲೆತ್ತಲಾಗದೇ ಪರದಾಡಿದರು. ಕೊನೆಗೆ ಕೈ ಚಾಚಿಕೊಂಡು ನಿಂತರು. ಸಚಿವ ದಿನೇಶ್ ಗುಂಡೂರಾವ್ ಸ್ಥಿತಿಯೂ ಇದೇ ಆಗಿತ್ತು.

ಇದನ್ನು ನೋಡಿದ ನೆಟ್ಟಿಗರು ಡಿಕೆಶಿ ಹಾಗೂ ಇತರರನ್ನು ಟ್ರೋಲ್ ಮಾಡಿದ್ದಾರೆ. ಯೋಗ ಮಾಡುವುದು ಅಷ್ಟು ಸುಲಭವಲ್ಲ ಸರ್. ಯೋಗ ಮಾಡಲೂ ಯೋಗ ಬೇಕು ಎಂದು ಕೆಲವರು ಕಾಲೆಳೆದಿದ್ದಾರೆ. ಇನ್ನು ಕೆಲವರು ಹೊಟ್ಟೆ ಕರಗಿಸಲೂ ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರಪೀಡಿತ ರೈತರಿಗೆ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂ ನೀಡಬೇಕು: ವಿಜಯೇಂದ್ರ

ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಲ್ಲ ಎಂದ ಬಿಕೆ ಹರಿಪ್ರಸಾದ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ಬಾಲಕಿ ಅದೊಂದು ಕಾರಣಕ್ಕೆ ಪ್ರಾಣವೇ ಕಳೆದುಕೊಂಡಳು: ಶಾಕಿಂಗ್ Video

ಎರಡು ಗೋವುಗಳ ನಡುವಿನ ಕಿತ್ತಾಟದಲ್ಲಿ ಬೈಕ್ ಸವಾರನ ಕತೆ ಗೋವಿಂದ Video

ಮುಂದಿನ ಸುದ್ದಿ
Show comments