Publish Date: Mon, 25 Sep 2017 (10:24 IST)
Updated Date: Mon, 25 Sep 2017 (10:35 IST)
ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಕುಟುಂಬ ಸಮೇತರಾಗಿ ಹರಕೆ ಪೂಜೆ ಸಲ್ಲಿಸಿದ್ದಾರೆ.
ಭಾನುವಾರ ಪತ್ನಿ, ಮಕ್ಕಳ ಸಮೇತ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಡಿಕೆಶಿ ಧಾನ್ಯಗಳ ತುಲಾಭಾರ ಸೇವೆ ಸೇರಿದಂತೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಐಟಿ ದಾಳಿಯ ನಂತರ ಡಿಕೆಶಿವಕುಮಾರ್ ಸಂಕಷ್ಟದಿಂದ ಪಾರು ಮಾಡಿದ್ದಕ್ಕೆ ಮೊದಲ ಬಾರಿಗೆ ನೊಣವಿನ ಕೆರೆ ಅಜ್ಜಯ್ಯನ ದರ್ಶನ ಪಡೆದಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಿದರು. ಹಿಂದೆಯೂ ಹಲವು ಬಾರಿ ಸಂಕಷ್ಟದ ಸಮಯದಲ್ಲಿ ಡಿಕೆಶಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ