Publish Date: Mon, 02 Feb 2026 (09:23 IST)
Updated Date: Mon, 02 Feb 2026 (09:26 IST)
ಕನಕಪುರ: ಡಿಸಿಎಂ ಡಿಕೆ ಶಿವಕುಮಾರ್ ಪಂಚೆ ಕಟ್ಟಿಕೊಂಡು ಹುಡುಗರೂ ನಾಚುವಂತೆ ಉತ್ಸಾಹದಿಂದ ವಾಲಿಬಾಲ್ ಆಡುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಿಕೆ ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಅದ್ಧೂರಿಯಾಗಿ ಕನಕೋತ್ಸವ ಆಯೋಜಿಸಿದ್ದರು. ಮೂರು ದಿನಗಳ ಕಾಲ ಕ್ರೀಡೆ, ವಿದ್ಯಾರ್ಥಿಗಳಿಗೆ ಪುರಸ್ಕಾರ, ಸೆಲೆಬ್ರಿಟಿಗಳಿಂದ ಮನರಂಜನೆ ಕಾರ್ಯಕ್ರಮ ಸೇರಿದಂತೆ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಿ ಜನರಿಗೆ ಫುಲ್ ಮನರಂಜನೆ ಒದಗಿಸಿದ್ದರು.
ಕನಕೋತ್ಸವದಲ್ಲಿ ಕ್ರೀಡೆಯೂ ಆಯೋಜನೆಯಾಗಿತ್ತು. ಈ ವೇಳೆ ಡಿಕೆ ಶಿವಕುಮಾರ್ ಶಾಲಾ ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ನಲ್ಲಿ ಸ್ವತಃ ಭಾಗಿಯಾಗಿದ್ದಾರೆ. ಪಂಚೆ ಕಟ್ಟಿಕೊಂಡೇ ವಿದ್ಯಾರ್ಥಿಗಳ ಜೊತೆ ವಾಲಬಾಲ್ ಆಡಿದ್ದಾರೆ.
ವಯಸ್ಸೂ ಮೀರಿ ಯುವಕರನ್ನೂ ನಾಚಿಸುವಂತೆ ಕೋರ್ಟ್ ತುಂಬಾ ಓಡಾಡಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಅವರ ಎನರ್ಜಿಗೆ ಹ್ಯಾಟ್ಸಪ್ ಹೇಳಿದ್ದಾರೆ.