Select Your Language

Notifications

webdunia
webdunia
webdunia
webdunia

ದೆಹಲಿ ಚುನಾವಣೆಗೆ ಕಾಲಿಟ್ಟ ಡಿಕೆ ಬಾಸು: ಡೆಲ್ಲಿಯಲ್ಲೂ ಡಿಕೆ ಶಿವಕುಮಾರ್ ಮ್ಯಾಜಿಕ್ ಮಾಡ್ತಾರಾ

DK Shivakumar

Krishnaveni K

ನವದೆಹಲಿ , ಮಂಗಳವಾರ, 7 ಜನವರಿ 2025 (08:58 IST)
ನವದೆಹಲಿ: ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪಾಲಿಗೆ ಟ್ರಬಲ್ ಶೂಟರ್ ಎಂದೇ ಹೇಳಲಾಗುತ್ತದೆ. ಇದೀಗ ಡಿಕೆ ಬಾಸು ಡೆಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಹೊರಟಿದ್ದಾರೆ. ಅಲ್ಲೂ ಅವರು ಮ್ಯಾಜಿಕ್ ಮಾಡುತ್ತಾರಾ ನೋಡಬೇಕು.


ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆ ಗೆಲುವು, ಅಷ್ಟೇ ಏಕೆ ಅದಕ್ಕೆ ಮೊದಲು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲು ಡಿಕೆ ಶಿವಕುಮಾರ್ ಅವರ ಶ್ರಮವೇ ಕಾರಣ.

ಇದೀಗ ಡಿಕೆ ಶಿವಕುಮಾರ್ ಗೆ ರಾಷ್ಟ್ರ ಕಾಂಗ್ರೆಸ್ ನಾಯಕರು ದೆಹಲಿ ಚುನಾವಣೆಯ ಹೊಣೆ ನೀಡಿದ್ದಾರೆ. ಕಾಂಗ್ರೆಸ್ ನ ಸಂಘಟನಾ ಚತುರ ಎಂದೇ ಕರೆಯಿಸಿಕೊಳ್ಳುವ ಡಿಕೆಶಿ ಡೆಲ್ಲಿಗೆ ಹೋಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ. ಡೆಲ್ಲಿಯಲ್ಲೂ ಕಾಂಗ್ರೆಸ್ ಗೆದ್ದರೆ ಗ್ಯಾರಂಟಿ ನೀಡುತ್ತೇವೆ ಎಂದು ಜನರಲ್ಲಿ ಭರವಸೆ ತುಂಬಲು ಯತ್ನಿಸಿದ್ದಾರೆ.

ದೆಹಲಿಯಲ್ಲಿ ಈಗ ಕಾಂಗ್ರೆಸ್ ಇಂಡಿಯಾ ಒಕ್ಕೂಟದಲ್ಲಿರುವ ಆಪ್ ಪಕ್ಷದ ವಿರೋಧ ಕಟ್ಟಿಕೊಂಡಿದೆ. ಹೀಗಾಗಿ ಆಪ್ ನ ಬೆಂಬಲವಿಲ್ಲದೇ ಕಾಂಗ್ರೆಸ್ ಗೆಲ್ಲಬೇಕಿದೆ. ಅದಕ್ಕೆ ಪ್ರಬಲ ನಾಯಕರೊಬ್ಬರ ಅಗತ್ಯವಿದೆ. ಆ ಕಾರಣಕ್ಕೆ ಡಿಕೆಶಿಯನ್ನು ಕರೆಸಿಕೊಳ್ಳಲಾಗಿದೆ. ಡೆಲ್ಲಿಯಲ್ಲಿ ಡಿಕೆಶಿ ಮ್ಯಾಜಿಕ್ ಮಾಡಿದರೆ ಅವರ ಖದರೇ ಬೇರೆಯಾಗಲಿದೆ ಬಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್‌ ಕಮಿಷನ್'ನಿಂದ , ಕಮಿಷನ್'ಗಾಗಿ, ಕಮಿಷನ್‌ಗಾಗಿರುವ ಸರ್ಕಾರ