Select Your Language

Notifications

webdunia
webdunia
webdunia
webdunia

ಆ ಬಣ ಅಲ್ಲ, ಈ ಬಣ ಅಲ್ಲ ಸ್ವತಃ ಡಿಕೆ ಶಿವಕುಮಾರ್ ಅವರಿಂದಲೇ ಡಿನ್ನರ್ ಪಾರ್ಟಿ

DK Shivakumar-Siddaramaiah
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗ ಶಾಸಕರು ಪ್ರತ್ಯೇಕ ಬಣಗಳಾಗಿ ಡಿನ್ನರ್ ಪಾರ್ಟಿ ಆಯೋಜಿಸಿದ್ದು ಇದೆ. ಆದರೆ ಈಗ ಆ ಬಣ ಅಲ್ಲ ಈ ಬಣ ಅಲ್ಲ ಸ್ವತಃ ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರ ಈಗ ತಕ್ಕಮಟ್ಟಿಗೆ ತಣ್ಣಗಾಗಿದೆ. ಹಾಗಿದ್ದರೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ಆಗೊಮ್ಮೆ ಈಗೊಮ್ಮೆ ಸಭೆ ನಡೆಸಿ, ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆ ಚಾಲ್ತಿಯಲ್ಲಿರುವಂತೆ ಮಾಡುತ್ತಾರೆ.

ಇದೀಗ ಸ್ವತಃ ಡಿಕೆ ಶಿವಕುಮಾರ್ ಮಾರ್ಚ್ 10 ರಂದು ಔತಣ ಕೂಟ ಏರ್ಪಡಿಸಿದ್ದಾರೆ. ಇದಕ್ಕೆ ಕೇವಲ ತಮ್ಮ ಜೊತೆಗೆ ಗುರುತಿಸಿಕೊಂಡಿರುವ ಶಾಸಕರು ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರನ್ನೂ ಆಹ್ವಾನಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಡಿನ್ನರ್ ಪಾರ್ಟಿ ಆಯೋಜನೆಯಾಗಿದೆ. ಇದಕ್ಕೆ ಕಾರಣವೂ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸುತ್ತಿದ್ದಾರೆ. ಇದೇ ನೆಪದಲ್ಲಿ ಎಲ್ಲರನ್ನೂ ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಆದರೆ ಇದರ ನಂತರ ಯಾವ ಬೆಳವಣಿಗೆಯಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಗೆ ಗೂಢಚರ್ಯೆಯ ಪಾಠವನ್ನು ಅವರ ತಂದೆ ಹೇಳಿಕೊಟ್ಟಿರಬಹುದು