Publish Date: Thu, 05 Jun 2025 (13:13 IST)
Updated Date: Thu, 05 Jun 2025 (13:16 IST)
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮಕ್ಕಳನ್ನು ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಗಳ ಗಳನೆ ಅತ್ತರು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಇಂತಹದ್ದೊಂದು ಘಟನೆ ಆಗಬಹುದು ಎಂಬ ಕಲ್ಪನೆಯೂ ನಮಗಿರಲಿಲ್ಲ. ವಿಧಾನ ಸೌಧದ ಬಳಿ ಕಾರ್ಯಕ್ರಮವನ್ನು ಹತ್ತು ನಿಮಿಷದಲ್ಲಿ ಮುಗಿಸಿದ್ದೆವು. ಆರ್ ಸಿಬಿಯವರು ಬರ್ತಾರೆ ಅಂತ ಆಗಲೇ ಘೋಷಣೆ ಮಾಡಿದ್ದು. ನಾವೂ ನಮ್ಮ ಕಡೆಯಿಂದ ತಯಾರಿ ಮಾಡಿಕೊಂಡ್ವಿ.
ಬಿಜೆಪಿಯವರು, ಕುಮಾರಸ್ವಾಮಿಯವರಿಗೆ ಹೆಣದ ಮೇಲೆ ರಾಜಕೀಯ ಮಾಡೋದೇ ಕೆಲಸ, ಬೇಕಿದ್ದರೆ ಪಟ್ಟಿ ಕೊಡ್ತೀನಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬಳಿಕ ಪಾಪ ಆ ಮಕ್ಕಳು, ಯುವಕರನ್ನೆಲ್ಲಾ ನೋಡುವಾಗ... ಎನ್ನುತ್ತಾ ಗಳ ಗಳನೆ ಅತ್ತೇ ಬಿಟ್ಟರು.