ನವದೆಹಲಿ: ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೇ ಇತ್ತ ಡಿಕೆ ಶಿವಕುಮಾರ್ ಫ್ಯಾನ್ಸ್ ಐದು ವರ್ಷ ಯಾಕೆ ಲೈಫ್ ಟೈಂ ಎಂದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪ ಬಂದಿದೆ. ಆದರೆ ಹೈಕಮಾಂಡ್ ಭೇಟಿಗೆ ಮುನ್ನ ಸಿದ್ದರಾಮಯ್ಯ ಐದು ವರ್ಷಕ್ಕೂ ನಾನೇ ಸಿಎಂ ಎಂದು ಘೋಷಿಸಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಗೆ ಕೆಲವೇ ಕೆಲವು ಶಾಸಕರ ಬೆಂಬಲವಿರಬಹುದು. ಎರಡು-ಮೂರು ಶಾಸಕರು ಅವರು ಸಿಎಂ ಆಗಲಿ ಎಂದಿರಬಹುದು. ಆದರೆ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಐದು ವರ್ಷ ನಾನೇ ಸಿಎಂ ಎಂದಿದ್ದಾರೆ.
ಅವರ ಈ ಮಾತಿಗೆ ಡಿಕೆ ಶಿವಕುಮಾರ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಶ್ರಮಪಟ್ಟ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದು ಡಿಕೆಶಿ. ಈಗ ಅವರಿಗೆ ಏನೂ ಇಲ್ಲ. ಡಿಕೆ ಶಿವಕುಮಾರ್ ಹಾಗಿದ್ರೆ ಬೇರೆ ಪಕ್ಷ ನೋಡಿಕೊಳ್ಳಲಿ. ಇವರನ್ನು ನಂಬಿ ಡಿಕೆಶಿ ಮಂಗ್ಯಾ ಆದ್ರು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಐದು ವರ್ಷ ಯಾಕೆ? ಲೈಫ್ ಟೈಂ ನಾನೇ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡು ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.