ಬೆಂಗಳೂರು: ಸಿಎಂ ಆಗಲು ಯಡಿಯೂರಪ್ಪ ಹಾದಿ ಹಿಡಿದರಾ ಡಿಕೆ ಶಿವಕುಮಾರ್ ಎಂಬ ಅನುಮಾನ ಮೂಡಿದೆ. ರಾತ್ರೋ ರಾತ್ರಿ ಡಿಕೆಶಿ ಮಾಡಿದ್ದೇನು ಇಲ್ಲಿದೆ ವಿವರ.
ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಭಾರೀ ಚಟುವಟಿಕೆ ಕಂಡುಬರುತ್ತಿದೆ. ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರು ಸಖತ್ ಆಕ್ಟಿವ್ ಆಗಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಣವೂ ಎಚ್ಚರಿಕೆಯಿಂದಿದೆ.
ನಿನ್ನೆ ರಾತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲಿ ಜೇನುಕಲ್ ಸಿದ್ಧೇಶ್ವರ ಸ್ವಾಮಿಗಳ ಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಕೂಡಾ ಮುಖ್ಯಮಂತ್ರಿಯಾಗುವ ಮುನ್ನ ಈ ಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದರು. ಹೀಗಾಗಿ ಡಿಕೆಶಿ ರಾತ್ರೋ ರಾತ್ರಿ ಸಿದ್ಧೇಶ್ವರ ಸ್ವಾಮಿಗಳ ಪಾದುಕೆಗಳಿಗೆ ಪೂಜೆ ಸಲ್ಲಿಸಿರುವುದು ನೋಡಿದರೆ ಸಿಎಂ ಆಗಲು ದೇವರ ಮೊರೆ ಹೋಗಿದ್ದಾರಾ ಎನ್ನುವ ಅನುಮಾನ ಮೂಡಿದೆ.
ಆದರೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್, ನನ್ನದು ಪ್ರತ್ಯೇಕ ಬಣವಿಲ್ಲ. ಹೈಕಮಾಂಡ್ ಸಂಪುಟ ವಿಸ್ತರಣೆ ಮಾಡಲು ಅಸ್ತು ಎಂದಿದೆ. ಇದಕ್ಕಾಗಿಯೇ ಕೆಲವು ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮಗೆ ಸಚಿವ ಸ್ಥಾನ ಕೊಡಿ ಎಂದು ಕೇಳುತ್ತಿದ್ದಾರೆ ಅಷ್ಟೇ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಮಾಧ್ಯಮ ಹೇಳಿಕೆಗಳಿಗೂ ಅವರ ನಡತೆಗೂ ಅಜಗಜಾಂತರ ವ್ಯತ್ಯಾಸವಿದೆ.