ಬರೆದಿಟ್ಕೊಳ್ಳಿ, ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುವುದು: ಡಿಕೆ ಶಿವಕುಮಾರ್

Krishnaveni K
ಶನಿವಾರ, 27 ಜುಲೈ 2024 (13:48 IST)
ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿಕೊಂಡ ಕಾರಣಕ್ಕೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೇಕಾದರೆ ಬರೆದಿಟ್ಕೊಳ್ಳಿ, ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ.

ರಾಮನಗರ ಹೆಸರು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಇದನ್ನು ವಿರೋಧಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮುಂದಿನ ಸಲ ನಾವು ಅಧಿಕಾರಕ್ಕೆ ಬಂದಾಗ ಮತ್ತೆ ರಾಮನಗರ ಎಂದು ಹೆಸರು ಬದಲಾವಣೆ ಮಾಡುತ್ತೇವೆ ಎಂದಿದ್ದರು.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ. ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶವಾಗುತ್ತಾರೆ ಎಂದು ಕುಮಾರಸ್ವಾಮಿ ಶಾಪ ಹಾಕಿದ್ದರು. ಈಗ ಅದಕ್ಕೆ ತಿರುಗೇಟು ನೀಡಿರುವ ಡಿಕೆಶಿ ಎಷ್ಟು ಒಳ್ಳೆಯದು ಮಾಡಿದರೂ ನನಗೆ ಕೆಲವರು ಶಾಪ ಹಾಕುತ್ತಾರೆ ಎಂದಿದ್ದಾರೆ.

‘ಕೆಂಗಲ್ ಹನುಮಂತಯ್ಯ ಬೆಂಗಳೂರಿಗೆ ಬಂದು ವಿಧಾನ ಸೌಧ ಕಟ್ಟಿದ್ರು. ದೇವೇಗೌಡರು, ಕುಮಾರಸ್ವಾಮಿ ಬೆಂಗಳೂರಿಗೆ ಬಂದರು. ನಮ್ಮ ಹಿರಿಯರು ಇಟ್ಟಿದ್ದ ಹೆಸರು ಇರಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಸರು ಬದಲಾವಣೆ ಮಾಡಲಾಗಿದೆ. 2028 ಕ್ಕೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ, ಬರೆದಿಟ್ಕೊಳ್ಳಿ’ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಸ್ಪರ್ಧಾತ್ಮಕ ಪರೀಕ್ಷೆಗೆ ಹೊರಟ್ಟಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣು

ದೆಹಲಿ ವಾಯುಮಾಲಿನ್ಯ: ನಾಳೆ ಶಾಲೆಗೆ ರಜೆ ಘೋಷಣೆ, 50% ಮನೆಯಿಂದ ಕೆಲಸಕ್ಕೆ ಅನುಮತಿ

ರಾಜ್ಯದಲ್ಲಿ 13ಲಕ್ಷ ಕಾರ್ಡುಗಳು ಅನರ್ಹ, ಸಚಿವ ಕೆಎಚ್ ಮುನಿಯಪ್ಪ ಕೊಟ್ಟ ಸಲಹೆ ಏನು

ಗೃಹಲಕ್ಷ್ಮಿ ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ: ಮಹೇಶ್ ಟೆಂಗಿನಕಾಯಿ

ಮುಂದಿನ ಸುದ್ದಿ
Show comments